ಮಂಗಳೂರು; ಸೆ.12- ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯ (ಎಸ್ ಡಿ ಪಿ ಐ) ದ ಸುಳ್ಯ ನಗರ ಸಭಾ ಸದಸ್ಯ ಬಿ ಉಮರ್ ಸುಳ್ಯ ಇವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವುದಕ್ಕೆ ಮತ್ತು ಪಕ್ಷದ ಆದೇಶಗಳನ್ನು ಉಲ್ಲಂಘಿಸಿದುದಕ್ಕೆ ಈ ಉಚ್ಛಾಟನೆ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.












