ಡೊಮೆಸ್ಟಿಕ್ ವಿಮಾನಯಾನ ಪ್ರಯಾಣಿಕರು ಇನ್ನು ಐಬಿ ನಿರೀಕ್ಷಣೆಗೆ!

0
573

ಸನ್ಮಾರ್ಗ ವಾರ್ತೆ

ಕೇರಳ,ಸೆ.13:ದೇಶದೊಳಗೆ ವಿಮಾನದಲ್ಲಿ ಪ್ರಯಾಣಿಸುವವರು ಕೂಡ ಇನ್ನು ಕೇಂದ್ರ ಇಂಟಲಿಜೆನ್ಸ್ ಬ್ಯೂರೊದ ನಿರೀಕ್ಷಣಾ ವ್ಯಾಪ್ತಿಗೆ ಬರಲಿದ್ದು, ಕೆಲವು ರೂಟ್‍ಗಳಲ್ಲಿ ಸದಾ ಪ್ರಯಾಣಿಸುವ ಪ್ರಯಾಣಿಕರ ಮೇಲೆ ಐಬಿ ನಿಗಾ ಇರಿಸಲಿದೆ. ಲಕ್ಷದ್ವೀಪ, ಮಾಲಿಗಳಿಗೆ ಹೋಗುವ ಪ್ರಯಾಣಿಕರು ನಿರೀಕ್ಷಣೆಗೆ ಒಳಾಗುತ್ತಾರೆ.

ಕಪ್ಪು ಹಣ ವ್ಯವಹಾರ ಮತ್ತಿತ್ಯಾದಿ ಭಯೋತ್ಪಾದಕ ಚಟುವಟಿಕೆಗಳು ಕೆಲವು ರಾಜ್ಯ, ಪ್ರದೇಶಗಳನ್ನು ಕೇಂದ್ರೀಕರಿಸಿ ನಡೆಯುತ್ತಿವೆ ಎಂಬ ವರದಿ ಇದಕ್ಕೆ ಕಾರಣವಾಗಿದ್ದು ಶ್ರೀಲಂಕಾ, ಮಾಲಿ ಮುಂತಾದೆಡೆಯಿಂದ ಬರುವ ವಿದೇಶಿ ಪ್ರಯಾಣಿಕರು ಯಾವ ರಾಜ್ಯಗಳಿಗೆ ಹೆಚ್ಚೆಚ್ಚು ಪ್ರಯಾಣಿಸುತ್ತಾರೆ ಎಂದು ವಿಶೇಷ ನಿಗಾ ಇರಿಸಲಾಗುವುದು.

ನಿರೀಕ್ಷಣೆಯ ಕೆಲಸವನ್ನು ರಾಷ್ಟ್ರೀಯ ಇಂಟಲಿಜೆನ್ಸ್ ಗ್ರಿಡ್ ಏಕೀಕರಿಸಲಿದೆ. ಈಗ ಕೇಂದ್ರ ಇಂಟಲಿಜೆನ್ಸ್ ವಿಭಾಗ ಮತ್ತು ರಾಜ್ಯ-ಜಿಲ್ಲಾ ಇಂಟಲಿಜೆನ್ಸ್ ವಿಭಾಗ ಹಾಗೂ ರಾ ವಿಮಾನ ನಿಲ್ದಾಣಗಳಲ್ಲಿ ನಿರೀಕ್ಷಣೆ ನಡೆಸುತ್ತಿವೆ.

ಕೆಲವು ವಿದೇಶಿಗಳು ಟೂರಿಸ್ಟ್ ವೀಸಾದಲ್ಲಿ ಬಂದು ನಕಲಿ ದಾಖಲೆ ಸೃಷ್ಟಿಸಿ ಭಾರತದಲ್ಲಿ ತಂಗುತ್ತಿರುವುದು ಕಂಡು ಬಂದಿದೆ. ಈ ರೀತಿ ಚಿನ್ನ ಕಳ್ಳಸಾಗಾಟ, ಹವಾಲ ಹಣ ಹಸ್ತಾಂತರಿಸುವವರು ಅಂತಾರಾಷ್ಟ್ರೀಯ ವಿಮಾಣಗಳನ್ನು ತಮ್ಮ ದಂದೆಗೆ ಉಪಯೋಗಿಸುತ್ತಿದ್ದಾರೆ ಎನ್ನುವುದು ಕೂಡ ಬೆಳಕಿಗೆ ಬಂದಿದೆ.