ನಿರೀಕ್ಷೆಗಿಂತಲೂ ಕೆಳಮಟ್ಟಕ್ಕೆ ಕುಸಿದ ಭಾರತದ ಆರ್ಥಿಕ ಬೆಳವಣಿಗೆ- ಐಎಂಎಫ್

0
893

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಸೆ.13: ಭಾರತದ ಆರ್ಥಿಕ ಬೆಳವಣಿಗೆ ನಿರೀಕ್ಷಿಸಿದ್ದಕ್ಕಿಂತಲೂ ಕೆಳಮಟ್ಟಕ್ಕೆ ಕುಸಿದಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಹೇಳಿದೆ. ಕಾರ್ಪೊರೇಟ್, ಬ್ಯಾಂಕೇತರ ಹಣಕಾಸು ಸಂಸ್ಥೆಯ ಅಸ್ಥಿರತೆ ಬಹುದೊಡ್ಡ ಸಮಸ್ಯೆ ಎಂದು ಐಎಂಎಫ್ ವಕ್ತಾರ ಜೆರಿ ರೈಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಭಾರತ ಸಹಿತ ಹಲವು ದೇಶಗಳು ಆರ್ಥಿಕ ಬೆಳವಣಿಗೆಯಲ್ಲಿ ಹಿನ್ನಡೆ ಎದುರಿಸುತ್ತಿವೆ.ಎಪ್ರಿಲ್-ಜೂನ್ ಕಾಲಾವಧಿಯಲ್ಲಿ ಆರ್ಥಿಕ ಬೆಳವಣಿಗೆ ಶೇ.5%ಕ್ಕೆ ಕುಸಿಯಿತು. ಏಳು ವರ್ಷದಲ್ಲಿ ಮೊದಲ ಬಾರಿ ಇಷ್ಟು ಕಡಿಮೆ ಅಂತರಕ್ಕೆ ಭಾರತದ ಆರ್ಥಿಕತೆ ಇಳಿಕೆಯಾಗಿದೆ. ಕಳೆದ ವರ್ಷ ಇದೇ ಹಂತದಲ್ಲಿ ಆರ್ಥಿಕ ಬೆಳವಣಿಗೆ ದರ ಶೇ.8%ಕ್ಕೆ ಇತ್ತು.