ಕಪ್ಪುಪಟ್ಟಿಯಿಂದ 312 ಸಿಖ್ಖರ ಹೆಸರು ತೆರವು

0
553

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.13: ಕಪ್ಪುಪಟ್ಟಿಯಿಂದ 312 ಸಿಕ್ಖರ ವಿದೇಶಿಗಳ ಹೆಸರುಗಳನ್ನು ಕೇಂದ್ರ ಸರಕಾರ ತೆರವು ಗೊಳಿಸಿದೆ. ಭಾರತ ವಿರೋಧಿ ಚಟುವಟಿಕೆಗಳಿಗಾಗಿ ಇನ್ನು ಇಬ್ಬರು ಸಿಕ್ಖರು ಮಾತ್ರ ಕೇಂದ್ರದ ಕಪ್ಪು ಪಟ್ಟಿಯಲ್ಲಿ ಉಳಿದಿದ್ದಾರೆ. ವಿವಿಧ ಸುರಕ್ಷಾ ಏಜೆನ್ಸಿಯ ಅವಲೋಕನ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಕಪ್ಪುಪಟ್ಟಿಯಿಂದಾದ ತೆರವು ಭಾರತಕ್ಕೆ ಭೇಟಿ ನೀಡಲು ಹಾೂ ಕುಟುಂಬ ಸದಸ್ಯರೊಂದಿಗೆ ಬೆರೆಯುವ ಅವಕಾಶವನ್ನು ಸಿಕ್ಖರಿಗೆ ಒದಗಲಿದೆ. ಖಾಲಿಸ್ತಾನವಾದಿ ರಾಷ್ಟ್ರದತ್ತು 1980ರಲ್ಲಿ ಹಲವಾರು ಸಿಖ್ಖರು ಈ ಆಂದೋಲನಕ್ಕೆ ಆಕರ್ಷಿತರಾಗಿದ್ದರು. ಇದಕ್ಕಾಗಿ ಕೆಲಸ ಮಾಡಿದ ಹಲವರು ಶಿಕ್ಷೆಯಿಂದ ಪಾರಾಗಲು ದೇಶ ತೊರೆದಿದ್ದರು. ಇವರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿತ್ತು. ಈಗ ಇವರ ಹೆಸರನ್ನು ಕಪ್ಪು ಪಟ್ಟಿಯಿಂದ ಕೈಬಿಡಲಾಗಿದೆ.