ಸನ್ಮಾರ್ಗ ವಾರ್ತೆ
ಕತಾರ್: ಕತಾರ್ ಇಂಡಿಯನ್ ಸೋಶಿಯಲ್ ಫೋರಂ ಆಯೋಜಿಸಿದ್ದ ಕಾರ್ನರ್ ಮೀಟ್, ಕತಾರ್ ನ ಮದೀನಾ ಖಲೀಫ ಹಾಗೂ ಲುಕ್ತಾದಲ್ಲಿ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಫೋರಂ(QISF)ನ ಬಗ್ಗೆ ಇಮ್ರಾನ್ ದೇರಳಕಟ್ಟೆ ಪ್ರಾಸ್ತಾವಿಕ ಮಾತುಗಳೊಂದಿಗೆ ಕಿರು ಪರಿಚಯವನ್ನು ನೀಡಿದರು.
ಬಿಜೆಪಿ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದ ದಿನದಿಂದ, ದಲಿತರ ಮತ್ತು ಅಲ್ಪಸಂಖ್ಯಾಂತರ ಮೇಲೆ ನಡೆಯುತ್ತಿರುವ ನಿರಂತರ ಹಲ್ಲೆ ಹಾಗೂ ಕರಾಳ ಕಾನೂನಿನ ವಿರುದ್ದ ಜಾತ್ಯತೀತ ಮನೋಭಾವನೆ ಹೊಂದಿದ ಸರ್ವರು ಹೋರಾಟದ ರಂಗಕ್ಕೆ ಇಳಿಯಬೇಕೆಂದು ಕರೆ ನೀಡಿದರು. ಮಾತ್ರವಲ್ಲ ಜೈ ಶ್ರೀರಾಮ್ ಹಾಗೂ ಜೈ ಹನುಮಾನ್ ಹೆಸರಿನಲ್ಲಿ ಹಾಗೂ ಗೋಹತ್ಯೆ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಗುಂಪು ಹತ್ಯೆಯ ವಿರುದ್ದ, ಆತ್ಮ ರಕ್ಷಣೆಗಾಗಿ ಪ್ರತಿರೋಧ ಒಡ್ಡುವುದು ಕಾಲದ ಬೇಡಿಕೆಯಾಗಿದೆ ಎಂದು ಶಾಕೀರ್ ಪುಂಜಾಲಕಟ್ಟೆಯವರು ಕತಾರ್‌ನ ಲುಕ್ತಾ ದಲ್ಲಿ ನಡೆದ ಕಾರ್ನರ್ ಮೀಟ್ ಕಾರ್ಯಕ್ರಮದಲ್ಲಿ ಕರೆ ನೀಡಿದರು.
ಪ್ರಸಕ್ತ ಸನ್ನಿವೇಶದಲ್ಲಿ ನಡೆಯುತ್ತಿರುವ NRC ಎಂಬ ಕಾಯ್ದೆ, UAPAಯಂತಹ ಕರಾಳ ಕಾನೂನು, ತ್ರಿವಳಿ ತಲಾಖ್ ಬಿಲ್ ಹಾಗೂ ಮುಸ್ಲಿಮ್ ಧಾರ್ಮಿಕ ನೇತಾರರನ್ನು ಭಯೋತ್ಪಾದಕರೆಂಬಂತೆ ಚಿತ್ರೀಕರಿಸುವ ಷಡ್ಯಂತ್ರದ ಬಗ್ಗೆ ಜಾಗೃತರಾಗಬೇಕೆಂದು ಜಲೀಲ್‌ರವರು ಮದೀನ ಖಲೀಫತ್‌ನಲ್ಲಿ ನಡೆದ ಕಾರ್ನರ್ ಮೀಟ್‌ನಲ್ಲಿ ಸವಿಸ್ತಾರವಾಗಿ ವಿವರಿಸಿದರು.
ಇಮ್ರಾನ್ ದೇರಳಕಟ್ಟೆ ಕಾರ್ಯಕ್ರಮವನ್ನು ನಿರೂಪಿಸಿದರು.












