ಹಿರಾ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಾಸ ಉಪನ್ಯಾಸ ಕಾರ್ಯಕ್ರಮ

0
695

ಸನ್ಮಾರ್ಗ ವಾರ್ತೆ

ಹಿರಾ ವಿಮೆನ್ಸ್ ಕಾಲೇಜು ಬಬ್ಬುಕಟ್ಟೆ’ಇದರ ವತಿಯಿಂದ ಹಿರಾ ಸಭಾಂಗಣದಲ್ಲಿ ಅತಿಥಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ಘಟಕ ಇದರ ನ್ಯಾಷನಲ್ ಸೆಕ್ರೆಟರಿ ರಹ್ಮತುನ್ನೀಸಾ ಸಾಹಿಬ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ಘಟಕ, ಕರ್ನಾಟಕ ಇದರ ರಾಜ್ಯ ಕಾರ್ಯದರ್ಶಿ ಅಮತುರ್ರಝಾಕ್ ಸಾಹಿಬ ಇವರು ವಿದ್ಯಾರ್ಥಿನಿಯರನ್ನುದ್ಧೇಶಿಸಿ ಮಾತನಾಡಿದರು.

ಇಂದಿನ ಪರಿಸ್ಥಿತಿಯಲ್ಲಿ ವಿದ್ಯಾರ್ಥಿ ಯುವ ಜನತೆ ಎದುರಿಸುವ ಸಮಸ್ಯೆಗಳು ಹಾಗೂ ಪರಿಹಾರ, ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ಹೇಗೆ ರೂಪಿಸಬೇಕೆಂಬುದರ ಬಗ್ಗೆ ಮುಕ್ತ ಚರ್ಚೆ ನಡೆಸಿದರು. ವೇದಿಕೆಯಲ್ಲಿ ಜನಾಬ್ ಕೆ.ಎಂ ಶರೀಫ್ ಸಾಹೇಬ್,  ಜಿಲ್ಲಾ ಸಂಚಾಲಕಿ ಸಮೀನಾ ನೂರ್, ನಗರ ಸಂಚಾಲಕಿ ಸಮೀನಾ ಅಫ್ಶಾನ್, ಉಪ ಸಂಚಾಲಕಿ ಸುಮಯ್ಯ ಹಮೀದುಲ್ಲಾಹ್, ಪ್ರಾಂಶುಪಾಲೆ ಭಾರತಿ ಎಂ.ಆರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಹಲೀಮಾ ಝಿಕ್ರಾ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿನಿ ಅಶ್ಫಿಯ ಧನ್ಯವಾದವಿತ್ತರು.