ಚೆನ್ನೈ ಟೆಕ್ಕಿಯ ಸಾವು; ಸರಕಾರದ ಮೇಲೆ ವಿಶ್ವಾಸವಿಲ್ಲ ಎಂದ ಮದ್ರಾಸ್ ಹೈಕೋರ್ಟು!

0
649

ಸನ್ಮಾರ್ಗ ವಾರ್ತೆ

ಚೆನ್ನೈ,ಸೆ.13: ಎಐಎಡಿಎಂಕೆ ಹೋರ್ಡಿಂಗ್‌ಗೆ ಬಿದ್ದ ಅವಘಡದಲ್ಲಿ ಚೆನ್ನೈಯಲ್ಲಿ ಯುವತಿಯೊಬ್ಬರು ಮೃತಪಟ್ಟಿದ್ದು ಈ ಘಟನೆಯಲ್ಲಿ ತಮಿಳ್ನಾಡು ಸರಕಾರವನ್ನು ಮದ್ರಾಸ್ ಹೈಕೋರ್ಟು ತೀವ್ರವಾಗಿ ತರಾಟೆಗೆತ್ತಿಕೊಂಡಿದೆ.

23 ವರ್ಷದ ಯುವತಿ ಶುಭಶ್ರೀಯವರ ಸಾವು ಬ್ಯೂರೊಕ್ರಸಿಯ ನಿರ್ಲಕ್ಷ್ಯವನ್ನು ತೋರಿಸುತ್ತಿದೆ ಎಂದು ಕೋರ್ಟು ಹೇಳಿದೆ. ಜನರ ಜೀವನಕ್ಕೆ ಇಲ್ಲಿ ಬೆಲೆಯಿಲ್ಲ.ಇದು ಬ್ಯೂರೊಕ್ರಸಿಯಾಗಿದೆ. ಸರಕಾರದಲ್ಲಿ ವಿಶ್ವಾಸ ಇಲ್ಲದಾಗಿದೆ ಎಂದು ಶುಭಶ್ರೀಯವರ ಸಾವಿಗೆ ಹೈಕೋರ್ಟು ಜಸ್ಟಿಸ್ ಶೆಹಸಾಯ ಹೇಳಿದರು. ಅನಧಿಕೃತ ಫ್ಲೆಕ್ಸ್‌ಗಳು, ಹೋರ್ಡಿಂಗ್‍ಗಳ ವಿರುದ್ಧ ಹಲವು ಬಾರಿ ಆದೇಶ ಹೊರಡಿಸಿದ್ದನ್ನು ಹೈಕೋರ್ಟು ಬೆಟ್ಟು ಮಾಡಿದೆ.

ಇದೇ ವೇಳೆ ಶುಭಶ್ರೀಯವರ ಸಾವಿಗೆ ರಾಜ್ಯ ಸರಕಾರ ಹೊಣೆಯೆಂದು ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಆರೋಪಿಸಿದ್ದಾರೆ. ಎಐಡಿಎಂಕೆ ಕೌನ್ಸಿಲರ್ ಪುತ್ರನ ಮದುವೆಗೆ ಹಾಕಲಾಗಿದ್ದ ಹೋರ್ಡಿಂಗ್ ಸ್ಕೂಟರಿನಲ್ಲಿ ಹೋಗುತ್ತಿದ್ದ ಶುಭಶ್ರೀಯವರ ಮೇಲೆ ಬಿದ್ದಿತ್ತು. ಸ್ಕೂಟರಿನಿಂದ ಕೆಳಗೆ ಬಿದ್ದ ಶುಭಶ್ರೀಯವರ ಮೇಲೆ ಹಿಂದಿನಿಂದ ಬಂದ ಕುಡಿಯುವ ನೀರಿನ ಟ್ಯಾಂಕರ್ ಹಾದುಹೋಗಿತ್ತು.