ವಲಸೆಗಾರರನ್ನು ತಡೆಯುವ ಆದೇಶಕ್ಕೆ ಅಮೆರಿಕನ್ ಸುಪ್ರೀಂ ಕೋರ್ಟ್‌ನಿಂದ ಹಸಿರು ನಿಶಾನೆ

0
750

ವಾಷಿಂಗ್ಟನ್,ಸೆ.13: ಮಧ್ಯಅಮೇರಿಕದ ದೇಶಗಳಿಂದ ಅಮೆರಿಕಕ್ಕೆ ವಲಸೆ ಬರುವುದನ್ನು ತಡೆಯುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರ ಆದೇಶವನ್ನು ಸುಪ್ರೀಂ ಕೋರ್ಟು ಎತ್ತಿಹಿಡಿದಿದೆ. ಉತ್ತಮ ಮಟ್ಟದ ಜೀವನದ ಕನಸು ಹೊತ್ತು ಗ್ವಾಟಮಾಲ, ಎಲ್-ಸಲ್‍ವಡೋರ್, ಹುಂಡರಸ್ ದೇಶಗಳಿಂದ ನಡೆದು ಮತ್ತು ಇತರ ಮಾರ್ಗಗಳ ಮೂಲಕ ಮೆಕ್ಸಿಕೊ ಗಡಿ ದಾಟುವ ಸಾವಿರಾರು ವಲಸೆಗಾರರಿಗೆ ಭಾರೀ ಹಿನ್ನಡೆಯಾಗಿದೆ. ಜುಲೈಯಲ್ಲಿ ನಿರಾಶ್ರಿತರನ್ನು ನಿಷೇಧಿಸಿ ಟ್ರಂಪ್ ಆದೇಶ ಹೊರಡಿಸಿದ್ದರು.

ಆದರೆ, ಕೆಳಕೋರ್ಟಿನ ಮಧ್ಯಪ್ರವೇಶದಿಂದ ಆದೇಶ ಜಾರಿಗೊಳಿಸುವುದಕ್ಕೆ ತಡೆ ಬಿದ್ದಿತ್ತು. ಅಮೆರಿಕ ಉದ್ದೇಶಿಸಿದ ನಿರಾಶ್ರಿತರ ಸಂಖ್ಯೆ ಕಡಿಮೆಗೊಳಿಸುವುದು ಟ್ರಂಪ್‍ರ ಚುನಾವಣಾ ಭರವಸೆಯಾಗಿದೆ. ಸುಪ್ರೀಂಕೋರ್ಟು ತೀರ್ಪಿಗೆ ಇದು ತನ್ನ ದೊಡ್ಡ ವಿಜಯ ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.