ಪಾರ್ಕಿಂಗ್ ವಿವಾದ: ವ್ಯಾಪಾರಿಯ ಇರಿದು ಕೊಲೆ

0
855

ಸನ್ಮಾರ್ಗ ವಾರ್ತೆ

ತೃಶೂರ್,ಸೆ.14: ಲಾಟರಿ ವ್ಯಾಪಾರಿಯನ್ನು ಪಾರ್ಕಿಂಗ್ ವಿವಾದದಲ್ಲಿ ವ್ಯಕ್ತಿಯೊಬ್ಬ ಇರಿದು ಕೊಲೆ ಮಾಡಿದ ಘಟನೆ ತೃೂರ್ ಜಿಲ್ಲೆಯ ಮಾಪ್ರಾನಂನಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿ ರಾಜನ್‍(ವ.65) ಎಂದು ಗುರುತಿಸಲಾಗಿದೆ. ರಾಜನ್‍ರ ಮನೆಯ ಮುಂದೆ ಇರುವ ಥಿಯೇಟರ್ ನಿರ್ವಾಹಕ ಮತ್ತು ಸಿಬ್ಬಂದಿಗಳು ರಾಜನ್‍ರಿಗೆ ಇರಿದ್ದಾರೆ. ಘಟನೆಯ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ನಿನ್ನೆ ರಾತ್ರೆ ಹನ್ನೆರಡು ಗಂಟೆಗೆ ಘಟನೆ ನಡೆದಿದೆ. ರಾಜನ್‍ರ ಮನೆಯ ಮುಂದೆ ವರ್ಣ ಥಿಯೇಟರ್ ಪಾರ್ಕಿಂಗ್ ವಿವಾದ ಗಲಾಟೆಗೆ ಕಾರಣವಾಗಿತ್ತು. ಥಿಯೇಟರ್‌ನಲ್ಲಿ ಪಾರ್ಕಿಂಗ್ ಸ್ಥಳ ತುಂಬಿದರೆ ವಾಹನಗಳನ್ನು ರಾಜನ್‍ರ ಮನೆಯ ಸಮೀಪ ಪಾರ್ಕಿಂಗ್ ಮಾಡಲಾಗುತ್ತಿತ್ತು. ಈ ಕುರಿತು ಥಿಯೇಟರ್ ನಿರ್ವಾಹಕನೊಡನರೆ ರಾಜನ್ ತನ್ನ ವಿರೋಧ ವ್ಯಕ್ತಪಡಿಸಿದ್ದರು. ನಿನ್ನೆ ಇದು ವಾಗ್ವಾದದ ಹಂತಕ್ಕೆ ತಲುಪಿತು. ನಂತರ ರಾತ್ರೆ ಹನ್ನೆರಡು ಗಂಟೆಗೆ ಬಂದ ದುಷ್ಕರ್ಮಿಗಳು ರಾಜನ್ ಮನೆಗೆ ಬಂದು ಇರಿದರು. ಇರಿತಕ್ಕೊಳಗಾದ ರಾಜನ್ ಮನೆಯಲ್ಲಿಯೇ ಮೃತಪಟ್ಟರು. ರಾಜನ್‍ರ ಅಳಿಯ ವಿನುವಿಗೆ ಬಿಯರ್ ಬಾಟ್ಲಿಯಿಂದ ತಲೆಗೆ ಪೆಟ್ಟಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.