ಸನ್ಮಾರ್ಗ ವಾರ್ತೆ
ಅಂಕಾರ,ಸೆ.14: ಟರ್ಕಿಯ ಮಾಜಿ ಪ್ರಧಾನ ಮಂತ್ರಿ ಅಹ್ಮದ್ ದಾವೂದ್ ಆಡಳಿತ ಪಕ್ಷ ಎಕೆ ಪಾರ್ಟಿಗೆ ರಾಜೀನಾಮೆ ನೀಡಿದ್ದು ತನ್ನ ನೇತೃತ್ವದಲ್ಲಿ ಹೊಸ ರಾಜಕೀಯ ಆಂದೋಲನ ರೂಪಿಸುವುದಕ್ಕಾಗಿ ಅವರು ಈ ನಿರ್ಧಾರ ತಳೆದಿದ್ದಾರೆ. ಅಧ್ಯಕ್ಷ ತಯ್ಯಿಬ್ ಉರ್ದುಗಾನ್ ತನ್ನ ಮುಖ್ಯ ಪ್ರತಿಸ್ಪರ್ಧಿಯಾಗಲಿದ್ದಾರೆ ಎಂಬ ಸೂಚನೆಯನ್ನು ಅವರು ನೀಡಿದ್ದಾರೆ.
ನಾನು ಹೊಸ ಪಕ್ಷವನ್ನು ರೂಪಿಸುತ್ತೇನೆ. ಇದು ನನ್ನ ಐತಿಹಾಸಿಕವಾದ ದೇಶದೊಂದಿಗೆ ನಿರ್ವಹಿಸುವ ಕರ್ತವ್ಯವಾಗಿದೆ. ಶುಕ್ರವಾರ ಅವರು ಮಾಧ್ಯಮಗಳೊಂದಿಗೆ ಮಾತಾಡುತ್ತಾ ತನ್ನ ಹೊಸ ಪಾರ್ಟಿ ಸ್ಥಾಪನೆಯ ಕುರಿತು ಸುಳಿವು ನೀಡಿದರು. 2009, 2014 ಮತ್ತು 2016ರಲ್ಲಿ ಅವರು ಟರ್ಕಿಯ ಪ್ರಧಾನಿಯಾಗಿದ್ದರು. ಉರ್ದುಗಾನ್ ನೇತೃತ್ವದ ಏಕೆ ಪಾರ್ಟಿಯ ಮುಖ್ಯ ನಾಯಕರಲ್ಲೊಬ್ಬರು. ಇತ್ತೀಚೆಗೆ ಏಕೆ ಪಾರ್ಟಿ ಮತ್ತು ಉರ್ದುಗಾನ್ರನ್ನು ಟೀಕಿಸಿ ರಂಗಪ್ರವೇಶಿಸಿದ್ದರು.












