ಶ್ರೀನಗರ ತುಂಬ ಸಿಆರ್‌ಪಿಎಫ್ ಬಂಕರ್‌ಗಳು; 42ನೇ ದಿನವೂ ಸ್ತಬ್ಧಗೊಂಡ ಜನಜೀವನ

0
832

ಸನ್ಮಾರ್ಗ ವಾರ್ತೆ

ಶ್ರೀನಗರ,ಸೆ.16: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸುವುದರೊಂದಿಗೆ ಸಿಆರ್‌ಪಿಎಫ್ ಬಂಕರ್‌ಗಳು ಶ್ರೀನಗರದಾದ್ಯಂತ ತುಂಬಿಕೊಂಡಿದೆ ಎಂದು ವರದಿಯಾಗಿದೆ. ಮುಖ್ಯ ಸ್ಥಳಗಳಲ್ಲಿ ಮರಳಿನ ಗೋಣಿಗಳನ್ನು ಪೇರಿಸಿಟ್ಟು ಮಾಡಿದ ಕವಚವನ್ನು ಕಾಣಬಹುದು. ತೆರವುಗೊಳಿಸಲು ಆಗುವಂತಹ ಬುಲೆಟ್ ಪ್ರೂಫ್ ಬಂಕ್‍ಗಳು ಸ್ಥಾಪನೆಯಾಗಿವೆ. ಭಯೋತ್ಪಾದಕರ ಎಲ್ಲ ಚಟವಟಿಕೆಗಳನ್ನು ವಿಫಲಗೊಳಿಸುವ ಉದ್ದೇಶದಿಂದ ಇದನ್ನು ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಜಹಂಗೀರ್ ಚೌಕ್, ಇಕ್ಬಾಲ್ ಸಬ್ಜಿ ಮಂಡಿ, ಬಕ್ಷಿ ಸ್ಟೇಡಿಯಂ, ಎಸ್.ಎಂ.ಎಚ್.ಎಸ್ ಆಸ್ಪತ್ರೆ ಪರಿಸರ ಮುಂತಾದ ಪ್ರದೇಶಗಳಲ್ಲಿ ವ್ಯಾಪಕ ಬಂಕರ್ ನಿರ್ಮಿಸಲಾಗಿದೆ. ಭಯೋತ್ಪಾದರಕ ಉಪಸ್ಥಿತಿಯಿದೆ ಎಂದು ಸುರಕ್ಷಾ ಸೇನೆಗೆ ಗುಪ್ತ ವಿವರ ಲಭಿಸಿದ ಹಿನ್ನೆಲೆಯಲ್ಲಿ ಬಂಕರ್ ನಿರ್ಮಿಸಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ. ಆದರೆ ಅಲ್ಲಿ ಜನಜೀವನ ಸಾಮಾನ್ಯಗೊಂಡ ಬಳಿಕ ಬಂಕರ್ ತೆರವುಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಸುರಕ್ಷಾ ಸೇನೆ ಹೆಚ್ಚು ಇಲ್ಲದ ಕಡೆ ಬಂಕರ್‌ಗಳನ್ನು ಹೊಸದಾಗಿ ಸ್ಥಾಪಿಸಲಾಗಿದೆ. ಹತ್ತು ವರ್ಷದ ಬಳಿಕ ಕಾಶ್ಮೀರದಲ್ಲಿ ಬಂಕರ್‌ಗಳನ್ನು ವ್ಯಾಪಕವಾಗಿ ಸ್ಥಾಪಿಸಲಾಗಿದೆ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಲಾದ ಬಳಿಕ ಸುರಕ್ಷೆ ಏರುಪೇರಾಗಿಲ್ಲ. ಆದರೆ ಯಾವ ಕ್ಷಣದಲ್ಲಿಯೂ ಏರುಪೇರು ಸಂಭವಿಸಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕಾಶ್ಮೀರದಲ್ಲಿ ನಿರಂತರ 42ನೆ ದಿವಸವೂ ಜನಜೀವನ ಸ್ತಬ್ಧವಾಗಿದೆ.