ಸನ್ಮಾರ್ಗ ವಾರ್ತೆ-
ಕೊಚ್ಚಿ, ಸೆ. 23: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಬೆಂಗಳೂರಿನ ಸೌಖ್ಯ ಆಸ್ಪತ್ರೆಗೆ ದಾಖಲಿಸಲಾದ ಪಿಡಿಪಿ ಅಧ್ಯಕ್ಷ ಅಬ್ದುನ್ನಾಸರ್ ಮಅದನಿ ಪ್ರಕರಣದ ವಿಚಾರಣೆ ತ್ವರಿತಗೊಳಿಸಬೇಕೆಂದು ಆಗ್ರಹಿಸಿ ಪಿಡಿಪಿ ಇಂದು ಸೋಮವಾರ ಕೇರಳ ಸೆಕ್ರಟರಿಯೇಟ್ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದೆ.
ಬೆಳಗ್ಗೆ 10:30 ಕ್ಕೆ ತಿರುವನಂತಪುರಂ ಪಾಳಯಂ ಹುತಾತ್ಮ ಮಂಟಪದಿಂದ ಮೆರವಣಿಗೆಯಲ್ಲಿ ಬಂದು ಸೆಕ್ರಟರಿಯೇಟ್ ಮುಂದೆ ಉಪವಾಸ ಆರಂಭವಾಗಿದೆ. ಸಿಪಿಎಂ ರಾಷ್ಟ್ರೀಯ ಕೌನ್ಸಿಲ್ ಸದಸ್ಯರೂ ಶಾಸಕರೂ ಆದ ಸಿ.ವಿವಾಕರನ್ ಉಪವಾಸ ಸತ್ಯಾಗ್ರಹವನ್ನು ಉದ್ಘಾಟಿಸಿದ್ದಾರೆ.
.












