ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಸೆ. 23: ನಾಲ್ಕು ರಾಜ್ಯಗಳಲ್ಲಿ ಏಕ ಸಮಯದಲ್ಲಿ ವಿಧಾನಸಭಾ ಉಪ ಚುನಾವಣೆ ನಡೆಯುತ್ತಿದ್ದು ಮತದಾನ ಪ್ರಗತಿಯಲ್ಲಿದೆ. ಉತ್ತರ ಪ್ರದೇಶದ ಹಿಮಾರ್‍ಪುರ, ಛತ್ತೀಸ್ ಗಡದ ದಂತೆವಾಡ, ತ್ರಿಪುರದ ಬದ್‍ಹರ್‍ಗಡ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು ಮೂರು ಫ್ಯಾಕ್ಟರನ್ನು ಬಿಜೆಪಿ ಆಶ್ರಯಿಸಿದೆ. ಮೂರು ಸ್ಥಾನಗಳು ಬಿಜೆಪಿಯದ್ದು, ಈ ತಿಂಗಳು 27ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಹಿಮಾರ್‍ಪುರ ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಉಪಚುನಾಣೆಯಲ್ಲಿ ಎಸ್ಪಿ,ಬಿಎಸ್ಪಿ ಸಖ್ಯ ಇಲ್ಲ. ಎರಡು ದಶಕಗಳ ಹಿಂದಿನ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಬಿಜೆಪಿಯ ಅಶೋಕ್‍ಕುಮಾರ್ ಚಂಡಾಲ್ ರಾಜೀನಾಮೆ ನೀಡಿದ್ದರಿಂದ ಇಲ್ಲಿ ಉಪಚುನಾವಣೆ ನಡೆಯುತ್ತಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಯುವರಾಜ್ ಠಾಕೂರ್, ಮುಸ್ಲಿಂ ಅಭ್ಯರ್ಥಿ ನೌಷಾದ ಅಲಿ ಬಿಎಸ್‍ಪಿ ಅಭ್ಯರ್ಥಿ, ಒಬಿಸಿ ವಿಭಾಗದ ಪ್ರಜಾಪತಿ ಸಮಾಜವಾದಿ ಪಾರ್ಟಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಬದ್‍ಹರ್‍ಗಡ್ದಲ್ಲಿ ತ್ರಿಕೋಣ ಸ್ಪರ್ಧೆ ನಿರೀಕ್ಷೆಯಿದೆ. ಬಿಜೆಪಿಯ ಹಾಲಿ ಶಾಸಕ ದಿಲೀಪ್ ಸರ್ಕಾರ್ ರ ನಿಧನಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಮೃತರು ಹಿಂದೆ ತೃಣಮೂಲ ಕಾಂಗ್ರೆಸ್, ಕಾಂಗ್ರೆಸ್‍ನಲ್ಲಿದ್ದರು. ನಂತರ ಬಿಜೆಪಿಯಿಂದ ಸ್ಪರ್ದಿಸಿಯೂ ವಿಜೇತರಾಗಿದ್ದರು. ಇಲ್ಲಿ ಮಿಮಿ ಮಜುಂದಾರ್ ಬಿಜೆಪಯಿಂದ ರತನ್ ದಾಸ್ ಕಾಂಗ್ರೆಸ್‍ನಿಂದ ಬುಲ್‍ತಿ ಕರ್ಮಾಕರ್ ಸಿಪಿಎಂನಿಂದ ಸ್ಪರ್ಧಿಸುತ್ತಿದ್ದಾರೆ.
ದಂತೆವಾಡದ ಶಾಸಕ ಬಿಜೆಪಿ ಭಿಮ ಮಾಂಡವಿ ಕೊಲೆಯಾಗಿದ್ದರಿಂದ ಉಪಚುನಾವಣೆ ನಡೆಯುತ್ತಿದೆ. ಭಿಮ ಮಾಂಡವಿ ಪತ್ನಿ ಒಜೆಸಿ ಬಿಜೆಪಿಯಿಂದ, ಮಹೇಂದ್ರ ಕರ್ಮ ಪತ್ನಿ ದೇವ್ತಿ ಕಾಂಗ್ರೆಸಿನಿಂದ ಸ್ಪರ್ಧಿಸುತ್ತಿದ್ದು ಇದು ನಕ್ಷಲ್ ಪ್ರಭಾವಿತ ಕ್ಷೇತ್ರವಾಗಿದೆ.












