ಕಳ್ಳಿ ಎಂದು ಹೇಳಿ ವಿಧವೆಯನ್ನು ಹೊಡೆದು ಕೊಂದ ಭೂಮಾಲಕ

0
551

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಸೆ. 23: ಕಳವು ಮಾಡಿದ ಆರೋಪ ಹೊರಿಸಿ ದಕ್ಷಿಣ ದಿಲ್ಲಿಯ ಮೆಹ್‍ರೋಲಿಯಲ್ಲಿ ವಿಧವೆ ಮಹಿಳೆಯೊಬ್ಬರನ್ನು ಭೂಮಾಲಕ ಮತ್ತು ಅವನ ಮಗ ಸೇರಿ ಹೊಡೆದು ಸಾಯಿಸಿದ್ದಾರೆ. ಎರಡು ಮಕ್ಕಳ ತಾಯಿ ಮಂಜು ಗೋಯಲ್(44) ಅನ್ಯಾಯವಾಗಿ ಮೃತಪಟ್ಟ ಮಹಿಳೆಯಾಗಿದ್ದು ಸತೀಶ್ ಪಹ್ವ ಎಂಬಾತ ಬಾಡಿಗೆ ಮನೆಯಲ್ಲಿ ಇವರು ವಾಸಿಸುತ್ತಿದ್ದರು. ತಾಯಿಯನ್ನು ಕಳಕೊಂಡು ಮಕ್ಕಳು ಅನಾಥವಾಗಿದೆ. ಶನಿವಾರ ಬೆಳಗ್ಗೆ ಮಂಜುರ ಸಹೋದರ ಪತ್ನಿಯನ್ನು ಕರೆದು ಕಳ್ಳತನವಾಗಿದೆ ಎಂದು ಪಹ್ವಾ ಹೇಳಿದ್ದಾನೆ. ವಿಷಯ ತಿಳಿದು ಸಹೋದರ ಮನೆಗೆ ಬಂದಾಗ ಮಂಜು ಹೊಡೆದದ್ದರಿಂದ ಅಶಕ್ತರಾಗಿರುವುದು ಕಂಡು ಬಂತು. ನಂತರ ಮಂಜು ಮೃತರಾದರು.

ಸತೀಶ್ ಪಹ್ವಾ ಮತ್ತು ಮಗ ಪಂಕಜ್‍ನನ್ನು ಬಂಧಿಸಲಾಗಿದೆ. ಕೊಲೆಯಾದ ಯುವತಿಯ ಮಕ್ಕಳು ಈ ವೇಳೆ ಹರಿಯಾಣದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.