ಸನ್ಮಾರ್ಗ ವಾರ್ತೆ-
ಮಂಗಳೂರು; ಸೆ. 23- ಮಂಗಳೂರಿನ ಸಾಹಿತ್ಯಾಸಕ್ತರ ಬಳಗದ ವತಿಯಿಂದ ನಗರದ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಕವಿ ನಜ್ಮಾ ನಜೀರ್ ಚಿಕ್ಕನೇರಳೆ ಅವರ ಪಿವೊಟ್ ಪದ್ಯಗಳು ಎಂಬ ಕವನ ಸಂಕಲನ ಬಿಡುಗಡೆಗೊಂಡಿತು. ಮಂಗಳೂರು ವಿವಿ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪಠಾಭಿರಾಮ ಸೋಮಯಾಜಿ ಕವನ ಸಂಕಲನವನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತಾಡಿದ ಅವರು,
ಇಂದಿನ ಯುವ ಜನಾಂಗದಲ್ಲಿ ಸಾಹಿತ್ಯದ ಅಭಿರುಚಿ ನಶಿಸುತ್ತಿದೆ. ಇಂಥ ಸ್ಥಿತಿಯಲ್ಲಿ ಯುವ ಜನಾಂಗವನ್ನು ಕಾವ್ಯ, ಸಾಹಿತ್ಯದ ಕಡೆ ಆಕರ್ಷಿಸುವ ಅಗತ್ಯ ಇದೆ.ಈ ಹಿನ್ನೆಲೆಯಲ್ಲಿ ಪಿವೊಟ್ ಪದ್ಯಗಳು ಸಮಾಜವನ್ನು ಎಚ್ಚರಿಸುವ ಕರೆಗಂಟೆಯಂತಿದೆ ಎಂದರು.
ಪ್ರಸಕ್ತ ಸಾಮಾಜಿಕ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಕೋಮುದ್ವೇಷದ ಮಾತು, ಕೃತಿಗಳು ಸದ್ದುಮಾಡುತ್ತಿರುವ ಈ ಹೊತ್ತಿನಲ್ಲಿ ಸಮಾಜದ ಮನಸ್ಸುಗಳನ್ನು ಬಡಿದೆಬ್ಬಿಸುವ ಅಗತ್ಯ ಇದೆ. ಪಿವೊಟ್ ಅಂತ ಕೆಲಸ, ಮಾಡಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕಥೆಗಾರ್ತಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರೆ ಯು ಟಿ ಫರ್ಜಾನ, ನಜ್ಮಾ ನಜೀರ್ ಚಿಕ್ಕನೇರಳೆ, ರಾಜ್ ನ್ಯೂಸ್ ನ ಕಾರ್ಯಕ್ರಮ ನಿರ್ವಾಹಕ ರಾ. ಚಿಂತನ್ ಉಪಸ್ಥಿತರಿದ್ದರು.
ಪತ್ರಕರ್ತ ಶಂಶೀರ್ ಬುಡೋಳಿ ಸ್ವಾಗತಿಸಿದರು. ಅಬ್ದುಲ್ ರಜಾಕ್ ಸಾಲ್ಮಾರ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವಿತ್ತರು.













