ಶಾಸಕರ ವಿಚಾರಣೆ ಮುಂದೂಡಿದ ನ್ಯಾಯಪೀಠ: ಅನರ್ಹರಲ್ಲಿ ತಳಮಳ

0
581

ಸನ್ಮಾರ್ಗ ವಾರ್ತೆ-

ದೆಹಲಿ; ಸೆ. 23- ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಹಾಗೂ ವಿಧಾನಸಭೆ ಕ್ಷೇತ್ರದಉಪಚುನಾವಣೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇಂದು ನಡೆಸಿದ ಎನ್‌.ವಿ ರಮಣ ಅವರ ನೇತೃತ್ವದ ತ್ರಿಸದ್ಯಸ ಪೀಠವು ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.

ಈ ಮೂಲಕ ಅನರ್ಹ ಶಾಸಕರಲ್ಲಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕ್ಷೀಣಿಸುತ್ತಿದೆ. 15 ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಪಟ್ಟಂತೆ ಇಂದಿನಿಂದಲೇ ನಾಮಮತ್ರ ಸಲ್ಲಿಕೆ ಆರಂಭವಾಗಿದ್ದು, ಸೆ. 30ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ನಾಮಪತ್ರ ಹಿಂಪಡೆಯಲು ಅ. 3 ಕೊನೆಯ ದಿನಾಂಕವಾಗಿದೆ. ಅ. 21ರಂದು ಚುನಾವಣೆ ನಡೆಯಲಿದ್ದು, 24ಕ್ಕೆ ಫಲಿತಾಂಶ ಹೊರಬರಲಿದೆ. ಅನರ್ಹ ಶಾಸಕರು ಸಲ್ಲಿರುವ ಅರ್ಜಿಗೆ ಸಂಬಂಧಪಟ್ಟಂತೆ ಅಂತಿಮ ತೀರ್ಪಿಗೆ ಇನ್ನೇರಡು ವಾರಗಳು ಬೇಕಾಗಿದ್ದು, ಹೀಗಾಗಿ ಅಲ್ಲಿಗೆ ಚುನಾವಣೆ ಕನಸು ಕನಸಾಗೇ ಉಳಿಯಲಿದೆ ಎನ್ನಲಾಗುತ್ತಿದ್ದು ಮುಂದೇನು ಅನ್ನುವಂತಾಗಿದೆ.

ಕಾಂಗ್ರೆಸ್ ಪರ ನ್ಯಾಯವಾದಿ ಕಪಿಲ್‌ ಸಿಬಲ್ ಅವರು ನ್ಯಾಯಾಲಯದ ಮುಂದೆ ಬುಧವಾರಕ್ಕೆ ವಿಚಾರಣೆ ನಡೆಸುವಂತೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ನ್ಯಾಯಪೀಠ ಬುಧವಾರಕ್ಕೆ ವಿಚಾರಣೆ ಮುಂದೂಡಿತು.