ಸನ್ಮಾರ್ಗ ವಾರ್ತೆ
ದುಬೈ,ಸೆ.24: ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ವೇಳೆ ಪ್ರಯಾಣಿಕನ ಬ್ಯಾಗ್ನಿಂದ ಎರಡು ಮಾವು ತೆಗೆದು ತಿಂದ ಪ್ರಕರಣದಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿಗೆ 5000 ದಿರ್ಹಮ್ ದಂಡ ಮತ್ತು ಊರಿಗೆ ಗಡೀಪಾರು ಶಿಕ್ಷೆ ನೀಡಲಾಗಿದೆ.
ದಂಡ, ಶಿಕ್ಷೆಗೊಳಗಾದ ಸಿಬ್ಬಂದಿ ಭಾರತೀಯನಾಗಿದ್ದಾನೆ. 2017ರಲ್ಲಿ ಬ್ಯಾಗ್ ವೊಂದರಿಂದ ಮಾವಿನ ಹಣ್ಣುಗಳನ್ನು ತೆಗೆದುಕೊಂಡು ತಿಂದು ಹಾಕಿದ್ದನು. ಬ್ಯಾಗೇಜ್ ತೆಗೆಯುವ ವೇಳೆ ನೀರು ಇದೆಯೇ ಎಂದು ನೋಡುತ್ತಿದೆ. ಬ್ಯಾಗ್ ತೆರೆದಾಗ ಮಾವಿನ ಹಣ್ಣು ಕಂಡಿತು. ಎರಡು ತೆಗೆದು ತಿಂದೆ ಎಂದು ಈತ ತನಿಖೆ ವೇಳೆ ತಿಳಿಸಿದ್ದಾನೆ.
ತೀರ್ಪಿನ ವಿರುದ್ಧ ಹದಿನೈದು ದಿವಸದೊಳಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ. ಆರು ದಿರ್ಹಮ್ ಮಾತ್ರ ಮಾವಿನ ಬೆಲೆಯಾಗಿದ್ದರೂ, ಪ್ರಯಾಣಿಕರ ವಸ್ತು ಮುಟ್ಟಿದ್ದು ಸುರಕ್ಷೆಯ ವಿಷಯದಲ್ಲಿ ಎಸಗಿದ ಲೋಪವಾಗಿದೆ. ಸಿಬ್ಬಂದಿಗಳು ಈ ವಿಷಯದಲ್ಲಿ ಹೆಚ್ಚು ಜವಾಬ್ದಾರರು. ಆದ್ದರಿಂದ ಭಾರೀ ದಂಡ ವಿಧಿಸಲಾಗಿದೆ ಎಂದು ವರದಿ ತಿಳಿಸಿದೆ.












