ಸನ್ಮಾರ್ಗ ವಾರ್ತೆ
ಕೋಟ್ಟಕ್ಕಲ್,ಸೆ.24:ದೇಶದಲ್ಲಿ ಯಾವ ಭಾಷೆಯನ್ನೂ ಕಡ್ಡಾಯವಾಗಿ ಹೇರಬೇಕಾದ ಅಗತ್ಯವಿಲ್ಲ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯಿಡು ಹೇಳಿದರು. ಅವರು ಕೇರಳಕ್ಕೆ ಭೇಟಿ ನೀಡಿದ ವೇಳೆ ಗೃಹ ಸಚಿವ ಅಮಿತ್ ಶಾರ ವಾದವನ್ನು ತಳ್ಳಿಹಾಕಿದ್ದಾರೆ.
ಈಗ ಇರುವ ವಿವಾದ ಅನವಶ್ಯಕ. ಗರಿಷ್ಠ ಭಾಷೆಯನ್ನು ನಾವು ಕಲಿಯಬೇಕು. ವಿರೋಧಿಸುವ ಅಗತ್ಯವಿಲ್ಲ. ಮಾತೃಭಾಷೆಗೆ ಪ್ರಾಮುಖ್ಯತೆ ನೀಡುವುದು ನಮ್ಮ ರೀತಿಯಾಗಿದೆ. ಕೇರಳಕ್ಕೆ ಮಾತೃಭಾಷೆ ಮಲಯಾಳಂ ಆಗಿದೆ ಎಂದು ಅವರು ಹೇಳಿದರು.
ವೈದ್ಯರತ್ನ ಪಿಎಸ್ ವಾರ್ಯರವರ 150ನೆ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಲು ಉಪ ರಾಷ್ಟ್ರಪತಿ ಕೇರಳಕ್ಕೆ ಬಂದಿದ್ದರು. ರಾಜ್ಯಪಾಲ ಮುಹಮ್ಮದ್ ಆರಿಫ ಖಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಚಿವರಾದ ಕೆಕೆ ಶೈಲಜಾ, ಕೆ.ಟಿ.ಜಲೀಲ್, ಸಂಸದ ಇಟಿ ಮುಹಮ್ಮದ್ ಬಶೀರ್, ಆರ್ಯ ವೈದ್ಯಶಾಲೆಯ ಟ್ರಸ್ಟಿ ಡಾ.ಪಿ.ಕೆ.ವಾರ್ಯರ್,ಮುಖ್ಯ ವೈದ್ಯರಾದ ಡಾ. ಪಿಎಂ ವಾರ್ಯರ್ ಕಾರ್ಯಕ್ರಮದಲ್ಲಿದ್ದರು.












