ಡೆಮಾಕ್ರಟಿಕ್ ಪಾರ್ಟಿಯಿಂದ ಟ್ರಂಪ್ ಉಚ್ಛಾಟನಾ ಕ್ರಮಕ್ಕೆ ಚಾಲನೆ

0
745

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಸೆ.25: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರನ್ನು ಉಚ್ಛಾಟಿಸುವ ಕ್ರಮಕ್ಕೆ ಡೆಮಕ್ರಾಟಿಕ್ ಪಾರ್ಟಿ ಸದಸ್ಯರು ಚಾಲನೆ ನೀಡಿದ್ದಾರೆ. ಮಾಜಿ ಉಪಾಧ್ಯಕ್ಷ ಜೊ ಬೆಡನ್ ಮತ್ತು ಪುತ್ರ ಹಂಟರ್ ಬೆಡನ್ ವಿರುದ್ಧ ತನಿಖೆ ಘೋಷಿಸಲು ಉಕ್ರೇನ್ ಅಧ್ಯಕ್ಷ ವೊಲ್ಡಿಮರ್ ಸೆಲನ್ ಸಿಕ್ಕ್ ಮೇಲೆ ಟ್ರಂಪ್ ಒತ್ತಡ ಹೇರಿದ್ದಾರೆಂದು ಟ್ರಂಪ್ ವಿರುದ್ಧ ಆರೋಪ ಹೊರಿಸಲಾಗಿದೆ.

2020 ಅಧ್ಯಕ್ಷ ಚುನಾವಣೆಯಲ್ಲಿ ಡೆಮಕ್ರಾಟಿಕ್ ಅಭ್ಯರ್ಥಿಗಳಲ್ಲಿ ಜೊ ಬೆಡನ್ ಒಬ್ಬರು ಆಗಿದ್ದಾರೆ. ಟ್ರಂಪ್ ಸಂವಿಧಾನದ ವಿರುದ್ಧ ವರ್ತಿಸಿದ್ದು ಅವರನ್ನು ಉಚ್ಛಾಟಿಸುವ ಅಧೀಕೃತ ಕ್ರಮಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಜನಪ್ರತಿನಿಧಿ ಸಭೆಯಲ್ಲಿ ಸ್ಪೀಕರ್ ಮತ್ತು ಡೆಮಕ್ರಾಟಿಕ್ ನಾಯಕ ನ್ಯಾನ್ಸಿ ಪೆಲೆಸಿ ತಿಳಿಸಿದರು.

ಟ್ರಂಪ್ ವಿರುದ್ಧ ಆರೋಪವನ್ನು ವಿಸಲ್ ಬ್ಲೊವರೆ ಮೊದಲು ಬಹಿರಂಗಪಡಿಸಿದ್ದು ಟ್ರಂಪ್ ನಂಬಿಗಸ್ಥ ನ್ಯೂಯಾರ್ಕ್ ಮಾಜಿ ಮೇಯರ್ ರೂಡಿ ಜೂಲಿಯಾನಿಯನ್ನು ಉಪಯೋಗಿಸಿ ತನಿಖೆ ಸಾಧ್ಯತೆಯ ಕುರಿತು ಉಕ್ರೈನ್‍ನೊಂದಿಗೆ ಚರ್ಚಿಸಿದ ವರದಿಯಾಗಿತ್ತು. ಜೂಲಿಯಾನಿಯೊಂದಿಗೆ ಸಹಕರಿಸಬೇಕೆಂದು ಎಂಟು ಬಾರಿ ಟ್ರಂಪ್ ಫೋನ್ ಮಾಡಿದ್ದರು ಎನ್ನಲಾಗಿದೆ.

ಇಂಟಲಿಜೆನ್ಸ್ ವಿಭಾಗ ಇನ್ಸ್‌ಪೆಕ್ಟರ್ ಮೈಕಿಲ್ ಅಡಕಿನ್ಸನ್‍ಗೆ ದೂರನ್ನು ಅವರು ಇಂಟಲಿಜೆನ್ಸ್ ಸಮಿತಿಗೆ ಹಸ್ತಾಂತರಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ದೇಶದ ನೀತಿಯನ್ನು ಶೋಷಣೆ ಮಾಡಿ ದೇಶದ ಆಂತರಿಕ ರಾಜಕೀಯದಲ್ಲಿ ಬೇರೊಂದು ದೇಶವನ್ನು ಮಧ್ಯಪ್ರವೇಶಿಸುವಂತೆ ಮಾಡುವುದು ಸಂವಿಧಾನ ಉಲ್ಲಂಘನೆ ಮತ್ತು ರಾಷ್ಟ್ರ ಸುರಕ್ಷೆಗೆ ಬೆದರಿಕೆಯಾಗಿದೆ ಎಂದು ಡೆಮಕ್ರಾಟಿಕ್‍ಗಳು ಹೇಳಿದ್ದಾರೆ.

ಉಚ್ಛಾಟನಾ ಕ್ರಮಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, “ತನ್ನನ್ನು ಬೇಟೆಯಾಡಲಾಗುತ್ತಿದೆ” ಎಂದು ಆರೋಪಿಸಿದ್ದಾರೆ. ಹೊಸ ಅಧ್ಯಕ್ಷ ಚುನಾವಣೆಯಲ್ಲಿ ಇದು ತನಗೆ ಸಹಾಯಕವಾಗಲಿದೆ ಅವರು ಎಂದು ಹೇಳಿದರು. ಇದೇ ವೇಳೆ 2020 ಅಧ್ಯಕ್ಷ ಚುನಾವಣೆಯಲ್ಲಿ ಉಚ್ಛಾಟನಾ ಪ್ರಕ್ರಿಯೆಯು ಟ್ರಂಪ್‍ಗೆ ಹಿನ್ನಡೆಯಾಗಲಿದೆ ಎಂದು ವರದಿಗಳು ತಿಳಿಸಿವೆ.