ಕಾಶ್ಮೀರದಲ್ಲಿ ಸೇನೆಯಿಂದ ಅಕ್ರಮ: ಮಕ್ಕಳೆಲ್ಲಿದ್ದಾರೆಂಬ ಸುಳಿವು ಸಿಗದೇ ಮುಗಿಲು ಮುಟ್ಟಿದ ತಾಯಂದಿರ ರೋದನ

0
1431

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.25:ಕಾಶ್ಮೀರದ ಸ್ಥಿತಿ ಈಗ ಭಯಾನಕವಾಗಿದೆ. ಬಂಧಿಸಲಾದ ಮಕ್ಕಳೆಲ್ಲಿದ್ದಾರೆ ಎಂದು ತಿಳಿಯದೆ ತಾಯಂದಿರ ರೋದನ ಮುಗಿಲು ಮುಟ್ಟಿದೆ ಎಂದು ಮಹಿಳಾ ಸಂಘಟನೆಗಳ ಸತ್ಯಶೋಧನಾ ತಂಡ ತಿಳಿಸಿದೆ.

ಸಂಜೆ ಆರು ಗಂಟೆಯ ನಂತರ ಹೊರಗೆ ಹೋಗುವ ಪುರುಷರು, ಮಕ್ಕಳನ್ನು ಸೇನೆ ಸೆರೆ ಹಿಡಿಯುತ್ತಿದೆ. ಕಾಶ್ಮಿರದ ಹೊರಗೆ ಆಗ್ರಾ, ಜೊಧ್ಪುರ, ಅಂಬೇಡ್ಕರ್, ಜಜ್ಜಾರ್ ಜೈಲಿಗೆ ಹಾಕುತ್ತಿದೆ. ಸೇನೆಗೆ ಹೆದರಿ ರಾತ್ರೆ ಎಂಟು ಗಂಟೆಯ ನಂತರ ಮನೆಯ ಬಲ್ಬ್‌ಗಳು ಉರಿಯುತ್ತಿಲ್ಲ ಎಂದು ಮಹಿಳಾ ಸಂಘಟನೆಗಳು ತಿಳಿಸಿವೆ. ರೇಷನ್‍ನನ್ನು ಸೇನೆ ಸೀಮೆ ಎಣ್ಣೆ ಸುರಿದು ನಾಶಪಡಿಸುತ್ತಿದೆ ಎಂದು ಕಾಶ್ಮೀರಿಗಳು ಹೇಳುತ್ತಿದ್ದಾರೆ.

ಕಾಶ್ಮೀರಕ್ಕೆ ಭೇಟಿ ನೀಡಿದ ನ್ಯಾಶನಲ್ ಫೆಡರೇಷನ್ ಆಫ್ ಇಂಡಿಯನ್ ವುಮೆನ್ಸ್ ನಾಯಕಿ ಅನಿರಾಜ, ಕವಲ್‍ಜಿತ್ ಕೌರ್, ಪಾನ್‍ಖುರಿ ಝಹೀರ್, ಪೂನಂ ಕೌಶಿಕ್ (ಪ್ರಗತಿಶೀಲ್ ಮಹಿಳಾ ಸಂಘ್) ಝೈದ ಹಮೀದ್ (ಮುಸ್ಲಿಂ ವುಮೆನ್ ಫಾರಂ) ತಿಳಿಸಿದರು.

ಸೆಪ್ಟಂಬರ್ 17-21 ತಾರೀಕಿನವರೆಗೆ ಕಾಶ್ಮೀರದಾದ್ಯಂತ ಸಂಚರಿಸಿ ತಯಾರಿಸಿದ ವರದಿಯನ್ನು ಪ್ರಸ್‍ ಕ್ಲಬ್ ಆಫ್ ಇಂಡಿಯಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇವರು ಬಿಡುಗಡೆಗೊಳಿಸಿದ್ದು, ಕಾಶ್ಮೀರ ಸಾಮಾನ್ಯ ಸ್ಥಿತಿಗೆ ಮರಳಿದೆ ಎಂಬ ವಾದ ನಿರಾಧಾರವೆಂದು ಇವರು ಹೇಳಿದ್ದಾರೆ.

ಸೇನೆ ಕಠಿಣ ದಾಳಿ ಕ್ರಮಗಳನ್ನು ನಡೆಸುತ್ತಿದೆ ಎಂದು ಅನಿರಾಜ ಹೇಳಿದರು. ಕಾಶ್ಮೀರದಲ್ಲಿ ಜನಾಂಗೀಯ ಹತ್ಯೆ ನಡೆಯುತ್ತಿದೆ. ಬಂಧಿಯಾಗಿಸಿದ್ದಕ್ಕೆ ಸಮಾನವಾದ ಜೀವನವನ್ನು ನಾವು ನಡೆಸುತ್ತಿದ್ದೇವೆ ಎಂದು ಜನರು ಏಕ ಧ್ವನಿಯಿಂದ ಹೇಳುತ್ತಿದ್ದಾರೆ. ಸೇನೆಯಿಂದ ಅಕ್ರಮ ನಡೆಯುತ್ತಿದೆ. ಸೇನೆ ಗಂಡು ಮಕ್ಕಳನ್ನು ರಾತ್ರೆ ಮನೆಯಿಂದ ಎತ್ತಿಕೊಂಡು ಹೋಗಿ ಜೈಲಿಗೆ ಹಾಕುತ್ತಿದೆ. ಈಗ ಇವರೆಲ್ಲಿದ್ದಾರೆಂಬ ಮಾಹಿತಿಯನ್ನೂ ಕುಟುಂಬಕ್ಕೆ ಹೇಳುತ್ತಿಲ್ಲ ಎಂದು ಕಾಶ್ಮೀರಿ ತಾಯಂದಿರು ರೋದಿಸುತ್ತಿದ್ದಾರೆ.