ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.25: ದೇಶದ ಉತ್ತರದಲ್ಲಿರುವ ವಾಯುಸೇನೆಯ ನೆಲೆಗಳಲ್ಲಿ ಕಟ್ಟೆಚ್ಚರಕ್ಕೆ ಆದೇಶ ನೀಡಲಾಗಿದೆ. ಶ್ರೀನಗರ, ಅವಂತಿಪುರ, ಜಮ್ಮು, ಪಠಾಣ್ ಕೋಟ್, ಹಿಂಡನ್ ವಾಯುಸೇನೆ ನೆಲೆಗಳಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಆರೆಂಜ್ ಲೆವೆಲ್ ನಿರ್ದೇಶ ಜಾರಿಗೆ ತರಲಾಗಿದೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿದ್ದಾಗಿ ಐಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪಾಕಿಸ್ತಾನದ ಭಯೋತ್ಪಾದನಾ ಸಂಘಟನೆ ಜೈಷೆ ದಾಳಿ ಮಾಡಬಹುದು ಎಂದು ಗುಪ್ತಚರ ವರದಿಯಿದ್ದು ಈ ಆಧಾರದಲ್ಲಿ ಕೇಂದ್ರ ಕ್ರಮ ಜರುಗಿಸಿದೆ. 24 ಗಂಟೆ ಉನ್ನತ ಅಧಿಕಾರಿಗಳು ಸುರಕ್ಷಾ ವ್ಯವಸ್ಥೆಯ ಮೇಲೆ ನಿಗಾ ಇರಿಸಿದ್ದಾರೆ. 8 ರಿಂದ 10 ಮಂದಿ ಜೈಷ್ ಭಯೋತ್ಪಾದಕರು ಆತ್ಮಾಹುತಿ ದಾಳಿ ನಡೆಸಲು ಶ್ರಮಿಸಲಿರುವರು ಎಂದು ಇಂಟೆಲಿಜೆನ್ಸ್ ಮಾಹಿತಿ ಇದ್ದು ಜಮ್ಮು-ಕಾಶ್ಮೀರದ ವಾಯುಸೇನೆ ನೆಲೆಯನ್ನು ಅವರು ಗುರಿಯಾಗಿರಿಸಿದ್ದಾರೆಂದು ವರದಿ ತಿಳಿಸಿದೆ.












