ಸನ್ಮಾರ್ಗ ವಾರ್ತೆ
ಚಂಡೀಗಡ,ಸೆ.25: ಪಾಕಿಸ್ತಾನದಿಂದ ಭಾರತಕ್ಕೆ ಡ್ರೋನ್ ಮೂಲಕ ಆಯುಧಗಳ ಸಾಗಾಟ ನಡೆದಿದೆ ಎಂದು ಗುಪ್ತಚರ ವರದಿ ನೀಡಿದ್ದು, ಎಕೆ 47, ಗ್ರೆನೆಡ್, ಸ್ಯಾಟಲೈಟ್ ಫೋನ್ ಸಹಿತ 80 ಕಿಲೊ ಆಯುಧಗಳ ಸಾಗಾಟ ನಡೆದಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಹಗುರ ವಸ್ತುಗಳನ್ನು ಸಾಗಿಸುವ ಚೈನೀಸ್ ಡ್ರೋನ್ಗಳನ್ನು ಆಯುಧ ಸಾಗಾಟಕ್ಕಾಗಿ ಉಪಯೋಗಿಸಲಾಗಿದೆ. ಈ ತಿಂಗಳು ಹತ್ತು ದಿವಸಗಳಲ್ಲಿ ತಲಾ ಐದು ಕಿಲೊ ಆಯುಧಗಳನ್ನು ಸಾಗಿಸಲಾಗಿದೆ ಎಂಬ ವಿವರ ಲಭ್ಯವಾಗಿದೆ.
ಪಾಕಿಸ್ತಾನದಿಂದ ಪಂಜಾಬ್ಗೆ ಆಯುಧಗಳ ಸಾಗಾಟ ನಡೆದಿದೆ. ಖಾಲಿಸ್ತಾನ್ ಸಂಘಟನೆಗಳು ಘಟನೆಯ ಹಿಂದಿವೆ ಎಂದು ತನಿಖಾ ಏಜೆನ್ಸಿಗಳು ಹೇಳುತ್ತಿವೆ.
ಆಯುಧ ಸಾಗಾಟವನ್ನು ಪಾಕಿಸ್ತಾನದ ಗುಪ್ತಚರ ಸಂಘಟನೆ ಐಎಸ್ಐ ಸಹಾಯದಿಂದ ಮಾಡಲಾಗಿದೆ. ಸೆಪ್ಟಂಬರ್ ಐದಕ್ಕೆ ಪಂಜಾಬ್ನ ತನ್ತಾರಣ್ನಲ್ಲಿ ಸ್ಫೋಟ ನಡೆದಿತ್ತು. ಇಲ್ಲಿ ನಡೆಸಲಾದ ತನಿಖೆಯಲ್ಲಿ ಡ್ರೋನ್ ಮೂಲಕ ಪಾಕಿಸ್ತಾನದಿಂದ ಆಯುಧ ಬರುತ್ತಿರುವ ವಿವರ ಲಭ್ಯವಾಯಿತು. ಘಟನೆಯಲ್ಲಿ ನಾಲ್ವರು ಖಾಲಿಸ್ಥಾನ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಇವರಿಂದ ಆಯುಧ ಮತ್ತು ಹತ್ತು ಲಕ್ಷ ರೂಪಾಯಿ ಖೋಟಾ ನೋಟು ವಶಪಡಿಸಿಕೊಳ್ಳಲಾಗಿತ್ತು.












