ಸನ್ಮಾರ್ಗ ವಾರ್ತೆ
ಮುಂಬೈ,ಸೆ.25: ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕಿನಿಂದ ಸಾಲ ಪಡೆದು ವಂಚಿಸಿದ ಪ್ರಕರಣದಲ್ಲಿ ಮಾಜಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ, ಎನ್‍ಸಿಪಿ ನಾಯಕ ಅಜಿತ್ ಪವಾರ್ ವಿರುದ್ಧ ಎಂಪೋರ್ಸ್‍ಮೆಂಟ್ ಡೈರಕ್ಟರೇಟ್(ಇಡಿ) ಕೇಸು ದಾಖಲಿಸಿದೆ.
ಶರದ್ ಪವಾರ್ ಸಹೋದರ ಪುತ್ರ ಅಜಿತ್ ಪವಾರ್ ಆಗಿದ್ದು ವಿಧಾನಸಭಾ ಚುನಾವಣೆ ನಿಕಟವಾಗಿರುವಾಗ ಇಡಿ ಕ್ರಮಕ್ಕೆ ಮುಂದಾಗಿದೆ. ಅಜಿತ್ ಪವಾರ್ ಅಲ್ಲದೆ ಕಾಂಗ್ರೆಸ್ ಸಖ್ಯ ಪಾರ್ಟಿ ಪಿಡಬ್ಲ್ಯುಪಿ ಅಧ್ಯಕ್ಷ ಜಯಂತ್ ಪಾಟೀಲ್, ಬ್ಯಾಂಕ್ ಅಧಿಕಾರಿಗಳ ಸಹಿತ 69 ಮಂದಿ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
ಒಂದು ತಿಂಗಳ ಹಿಂದೆ ಮುಂಬೈ ಹೈಕೋರ್ಟಿನ ಆದೇಶ ಪ್ರಕಾರ ಮುಂಬೈ ಪೊಲೀಸರು ಇವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದರು. ಇದರ ಆಧಾರದಲ್ಲಿ ಕಪ್ಪು ಹಣ ಬಿಳಿ ಮಾಡುವುದನ್ನು ತಡೆಯುವ ಪಿಎಂಎಲ್‍ಎ ಕಾನೂನು ಪ್ರಕಾರ ಕೇಸು ದಾಖಲಿಸಲಾಗಿದ್ದು ಸಕ್ಕರೆ ಕಾರ್ಖಾನೆಗೆ ಸಾಲ ನೀಡಿ ಬ್ಯಾಂಕಿಗೆ 25,000 ಕೋಟಿ ರೂಪಾಯಿ ನಷ್ಟವಾಗುವಂತೆ ಮಾಡಿದ್ದಾರೆಂದು ಆರೋಪ ಹೊರಿಸಲಾಗಿತ್ತು.
ಎನ್‍ಸಿಪಿಯಿಂದ ಶಾಸಕರು, ಸಂಸದರು ಹಿರಿಯ ನಾಯಕರು ಇತ್ತೀಚೆಗೆ ಬಿಜೆಪಿ, ಶಿವಸೇನೆಗೆ ಪಕ್ಷಾಂತರವಾಗಿದ್ದರು. ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಸಿ ತನಿಖಾ ಸಂಸ್ಥೆಗಳನ್ನು ದುರುಪಯೋಗಿಸಿ ನಾಯಕರಲ್ಲಿ ಹೆದರಿಕೆಯುಂಟು ಮಾಡಿ ಬಿಜೆಪಿ ಪಕ್ಷಾಂತರ ಮಾಡಿಸುತ್ತಿದೆ ಎಂದು ಎನ್‍ಸಿಪಿ ಆರೋಪಿಸಿತ್ತು. ಅಜಿತ್‍ರ ಪತ್ನಿ, ಸಹೋದರ, ಪವಾರ್‌ರ ಬಲಗೈ ಪದಂಸಿಂಗ್ ಪಾಟೀಲ್ ಕೂಡ ಎನ್‍ಸಿಪಿ ತೊರೆದು ಬಿಜೆಪಿಗೆ ಹೋಗಿದ್ದರು. ಕಾಂಗ್ರೆಸ್ ನಾಯಕರೊಬ್ಬರ ಕೊಲೆ ಪ್ರಕರಣದಲ್ಲಿ ಪದಂಸಿಂಗ್ ಆರೋಪಿಯಾಗಿದ್ದಾರೆ.












