ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ಸೆನೆಟರ್: ಪತ್ರಕರ್ತನಿಗೆ ಗಾಯ

0
552

ಪೋರ್ಟ್‌ ಓ ಪ್ರಿನ್ಸ್,ಸೆ.25: ಹೈಟಿಯಲ್ಲಿ ಪಾರ್ಲಿಮೆಂಟ್ ಮುಂಭಾಗದಲ್ಲಿ ಪ್ರತಿಭಟನಾಕಾರರ ಮೇಲೆ ಸೆನೆಟರ್ ಒಬ್ಬರು ಗುಂಡು ಹಾರಿಸಿದ್ದು, ಘಟನೆಯಲ್ಲಿ ಪತ್ರಕರ್ತರೊಬ್ಬರು ಗಾಯಗೊಂಡಿದ್ದಾರೆ. ಹೈಟಿಯ ಆಡಳಿತ ಪಾರ್ಟಿಯ ಸೆನೆಟರ್ ಜಿನ್ ಮಾರಿ ರಾಲ್ಫ್ ಪೆದರ್ ಪ್ರತಿಭಟನಾಕಾರರ ವಿರುದ್ಧ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾರೆ.

ಬಂಡುಕೋರರು ತನ್ನ ಮೇಲೆ ದಾಳಿಗೆ ಮುಂದಾದಾಗ ಸ್ವರಕ್ಷಣೆಗಾಗಿ ಗುಂಡು ಹಾರಿಸಿದೆ ಎಂದು ಜಿನ್ ಮಾರಿ ಹೇಳಿದರು. ತನ್ನ ಕಾರಿನಿಂದ ಎಳೆದು ಹೊಡೆಯಲು ನೋಡಿದರು. ಪಾರ್ಲಿಮೆಂಟಿಗೆ ನುಗ್ಗಿ ಬಂಡುಕೋರರು ಪಾರ್ಲಿಮೆಂಟ್ ಪ್ರಕ್ರಿಯೆಯನ್ನು ಅಡ್ಡಿಪಡಿಸಿದ್ದಾರೆ. ಜಿನ್ ಮಾರಿ ಗುಂಡು ಹಾರಿಸಿದ್ದರಿಂದ ಪತ್ರಕರ್ತನ ಮುಖಕ್ಕೆ ಗಾಯವಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯ ಕುರಿತು ಅಧ್ಯಕ್ಷ ಜೊವೀನಲ್ ಮಾಯ್ಸಿ ತನಿಖೆಗೆ ಆದೇಶಿಸಿದ್ದಾರೆ.