ಸನ್ಮಾರ್ಗ ವಾರ್ತೆ
ಶ್ರೀನಗರ,ಸೆ.28: ಜಮ್ಮು-ಕಾಶ್ಮೀರದಲ್ಲಿ ಶನಿವಾರ ಬೆಳಗ್ಗೆ ವಿವಿಧ ಕಡೆಗಳಲ್ಲಿ ಭಯೋತ್ಪಾದನಾ ದಾಳಿ ನಡೆದಿದ್ದು ಎರಡು ಘರ್ಷಣೆಯ ಘಟನೆಗಳು ಮತ್ತು ಒಂದು ಗ್ರೆನೆಡ್ ದಾಳಿ ನಡೆದಿದ್ದು, ಓರ್ವ ಭಯೋತ್ಪಾದಕನ್ನು ಹತ್ಯೆ ಮಾಡಲಾಗಿದೆ.
ರಂಬಾನ್ ಜಿಲ್ಲೆಯ ಬತ್ತೊದಲ್ಲಿ ಮೂವರು ಭಯೋತ್ಪಾದಕರು ಪ್ರಯಾಣಿಕ ಬಸ್ ಅಪಹರಣಕ್ಕೆ ಯತ್ನಿಸಿದರು. ಜಮ್ಮು-ಶ್ರೀನಗರ ಹೈವೆಯಲ್ಲಿ ಈ ಘಟನೆಯು ನಡೆದಿದೆ. ಬಸ್ ನಿಲ್ಲಿಸದೆ ಪಾರಾದ ಘಟನೆಯನ್ನು ಚಾಲಕ ಸುರಕ್ಷಾ ಸೇನೆಗೆ ತಿಳಿಸಿದ್ದಾನೆ.
ನಂತರ ಸೈನ್ಯ, ಪ್ರದೇಶವನ್ನು ಸುತ್ತುವರಿದು ಹುಡುಕಾಟ ಆರಂಭಿಸಿತ್ತು. ಒಂದು ಮನೆಗೆ ನುಗ್ಗಿದ ಭಯೋತ್ಪಾದಕರು ಅಲ್ಲಿನ ಮನೆಯವರನ್ನು ಬಂದಿಯಾಗಿ ತಡೆದಿರಿಸಿದ್ದರು. ಗಂಟರ್ಬಲ್ನಲ್ಲಿ ಘರ್ಷಣೆ ನಡೆದಿದ್ದು, ಇಲ್ಲಿ ಸೈನ್ಯ ಒಬ್ಬ ಭಯೋತ್ಪಾದಕನನ್ನು ಕೊಲೆ ಮಾಡಿದೆ. ಶ್ರೀನಗರದ ಜನವಾಸ ಕೇಂದ್ರದಲ್ಲಿ ಗ್ರೆನೆಡ್ ದಾಳಿ ನಡೆದಿದ್ದು ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಗ್ರೆನೆಡ್ ದಾಳಿ ನಡೆಸಿದ ಭಯೋತ್ಪಾದಕರನ್ನು ಸೇನೆ ಹುಡುಕುತ್ತಿದೆ.












