ಮೋದಿ ಶಾಂತಿಯ ಕುರಿತು ಹೇಳಿದರೆ, ಇಮ್ರಾನ್ ಯುದ್ಧದ ಕುರಿತು ಮಾತಾಡಿದ್ದಾರೆ- ಗೌತಮ್ ಗಂಭೀರ್

0
547

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.28: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿಶ್ವಸಂಸ್ಥೆಯಲ್ಲಿ ಹಾಕಿದ ಯುದ್ಧ ಬೆದರಿಕೆಯ ವಿರುದ್ಧ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಂ ಗಂಭೀರ್ ಟೀಕಿಸಿದದಾರೆ. ಖಾನ್ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಉದ್ಧರಿಸಿ ಮಾತಾಡಿದ್ದಾರೆ. ನರೇಂದ್ರ ಮೋದಿ ಒಗ್ಗಟ್ಟು, ಶಾಂತಿಯ ಕುರಿತು ಮಾತಾಡಿದರು. ಭಾರತದ ಕನಸಿನ ಯೋಜನೆಗಳನ್ನು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಕುರಿತು ಮಾತಾಡಿದರು ಎಂದು ಗಂಭೀರ್ ಹೇಳಿದರು.

ಪ್ರತಿಯೊಬ್ಬರಿಗೂ ಹದಿನೈದು ನಿಮಿಷ ಸಮಯವಿತ್ತು. ಈ ಸಮಯದಲ್ಲಿ ಓರ್ವರು ಮಾತನಾಡುವುದು ಅವರ ಸ್ವಭಾವವನ್ನು ತೋರಿಸುತ್ತದೆ. ನರೇಂದ್ರ ಮೋದಿ ಶಾಂತಿ ಅಭಿವೃದ್ಧಿಯನ್ನು ಮಾತಾಡಲು ಈ ಸಮಯ ಉಪಯೋಗಿಸಿದರೇ, ಪಾಕ್ ಸೈನ್ಯದ ಕೈಗೊಂಬೆ ಅಣು ಯುದ್ಧದ ಕುರಿತು ಹೇಳಿ ಬೆದರಿಕೆ ಹಾಕಿದೆ. ಕಾಶ್ಮೀರದಲ್ಲಿ ಶಾಂತಿ ತರಲಾಗುವುದು ಎಂದ ಅದೇ ಮನುಷ್ಯ ಈತ ಎಂದು ಗಂಭೀರ್ ವ್ಯಂಗ್ಯವಾಡಿದರು.

ಭಾರತದೊಂದಿಗೆ ಯುದ್ಧ ಸ್ಫೋಟವಾದರೆ ಪಾಕಿಸ್ತಾನಕ್ಕಿಂತ ಏಳು ಪಟ್ಟು ದೊಡ್ಡದಾಗಿರುವ ಭಾರತದ ವಿರುದ್ಧ ಅಣುಶಕ್ತಿಯಾಗಿರುವ ಪಾಕಿಸ್ತಾನ, ಬೇರೆ ಮಾರ್ಗಗಳನ್ನು ಹುಡುಕುವುದಿಲ್ಲ. ತಾನು ಹೋರಾಡುವೆ ಎಂದು ವಿಶ್ವಸಂಸ್ಥೆಯಲ್ಲಿ ನೀಡಿದ ಭಾಷಣದಲ್ಲಿ ಇಮ್ರಾನ್ ಬೆದರಿಕೆ ಹಾಕಿದ್ದರು.