ಕ್ಯಾನ್ಸರ್ ಗುಣವಾಗದ ಕಾಯಿಲೆಯೇ ಅಥವಾ ಉದ್ಯಮದ ಕೈಚಳಕವೇ? ವರ್ಷ ಕಳೆದಂತೆ ಕ್ಯಾನ್ಸರ್ ನಲ್ಲಿ ಏರಿಕೆಯೇಕೆ?

0
974

ಸನ್ಮಾರ್ಗ ವಾರ್ತೆ-

ಕ್ಯಾನ್ಸರ್ ತುಂಬಾ ದೊಡ್ಡ ಲಾಭದಾಯಕ ಉದ್ಯಮವಾಗಿದೆ ಎಂದು ನಂಬುವ ಅನೇಕರು ಇದ್ದಾರೆ. ಮತ್ತು ಇದಕ್ಕೆ ಪುರಾವೆಗಳು ಇವೆ ಎಂದು ಅವರು ಹೇಳುತ್ತಾರೆ.

ಅಸ್ತಿತ್ವದಲ್ಲಿರುವ ಯಾವುದೇ ಕಡಿಮೆ-ವೆಚ್ಚದ, ನೈಸರ್ಗಿಕ ಮತ್ತು ಪರ್ಯಾಯ ಕ್ಯಾನ್ಸರ್ ಚಿಕಿತ್ಸೆಯನ್ನು ಈ ಉದ್ಯಮ ಪರಿಣಾಮಕಾರೀ ಎಂದು ಒಪ್ಪುವುದಿಲ್ಲ. ಹಾಗೆ ಒಪ್ಪಿಕೊಂಡರೆ ಉದ್ಯಮದ ಮೂಲಾಧಾರವಾದ ಆದಾಯ ನಾಸ್ತಿಯಾಗಬಹುದೆಂಬ ಭಯ. ಉದ್ಯಮವು ನಮ್ಮನ್ನು ನಿಜವಾದ ಕ್ಯಾನ್ಸರ್ ಗುಣಪಡಿಸುವಿಕೆಯಿಂದ ದೂರವಿರಿಸುತ್ತದೆ ಎಂದು ಹೇಳಲಾಗುತ್ತದೆ.

1940 ರ ದಶಕದಲ್ಲಿ, ಇಂದು ನಾವು ನೋಡುವ ಎಲ್ಲಾ ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಮೊದಲು, ಪ್ರತಿ 16 ಜನರಲ್ಲಿ ಒಬ್ಬರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು; 1970 ರ ಹೊತ್ತಿಗೆ, ಆ ಅನುಪಾತವು 10 ರಲ್ಲಿ ಒಂದಕ್ಕೆ ಇಳಿಯಿತು. ಇಂದು, ಇಬ್ಬರು ಪುರುಷರಲ್ಲಿ ಒಬ್ಬರು ಯಾವುದಾದರೊಂದು ಬಗೆಯ ಕ್ಯಾನ್ಸರ್ ನ ಅಪಾಯದಲ್ಲಿದ್ದಾರೆ ಮತ್ತು ಮಹಿಳೆಯರಲ್ಲಿ ಈ ಅನುಪಾತವು ಮೂರರಲ್ಲಿ ಒಂದಾಗಿದೆ.

“ಕ್ಯಾನ್ಸರ್ ಉದ್ಯಮವು ಬಹುಶಃ ಅಮೇರಿಕಾದಲ್ಲಿ ಅತ್ಯಂತ ಶ್ರೀಮಂತ ವ್ಯವಹಾರವಾಗಿದೆ. 2014 ರಲ್ಲಿ, ಅಮೆರಿಕಾದಲ್ಲಿ 16,65,540 ಹೊಸ ಕ್ಯಾನ್ಸರ್ ಪ್ರಕರಣಗಳು ಮತ್ತು 5,85,720 ಕ್ಯಾನ್ಸರ್ ಸಾವುಗಳು ಪತ್ತೆಯಾಗಿದೆ. 6 ಬಿಲಿಯನ್ ಡಾಲರ್ ತೆರಿಗೆ ಹಣವನ್ನು ವಿವಿಧ ಫೆಡರಲ್ ಏಜೆನ್ಸಿಗಳ ಮೂಲಕ ಕ್ಯಾನ್ಸರ್ ಸಂಶೋಧನೆಗಾಗಿ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ (ಎನ್‌ಸಿಐ)ಗೆ ನೀಡಲಾಗುತ್ತದೆ.

ಚಲನಚಿತ್ರ ನಿರ್ಮಾಪಕ ವೇಯ್ನ್ ಚೆಸ್ಲರ್ ಅವರ 2010 ರ ಕಟ್ ಪಾಯ್ಸನ್ ಬರ್ನ್ ಎಂಬ ಸಾಕ್ಷ್ಯಚಿತ್ರವು ಅಮೆರಿಕಾದಲ್ಲಿ ಕ್ಯಾನ್ಸರ್ (ಶಸ್ತ್ರಚಿಕಿತ್ಸೆ, ಕೀಮೋಥೆರಪಿ ಮತ್ತು ವಿಕಿರಣ) ಗಾಗಿ ಸಾಂಪ್ರದಾಯಿಕ ಚಿಕಿತ್ಸೆಗಳ ವ್ಯವಹಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ಹಲವಾರು ಸಂಗತಿಗಳನ್ನು ಪ್ರಸ್ತುತಪಡಿಸಿದೆ. ಕ್ಯಾನ್ಸರ್ ಗುಣಪಡಿಸುವಿಕೆಗೆ ನಾವು ಹತ್ತಿರದಲ್ಲಿಲ್ಲ ಎಂದು ಅದು ಬಹಿರಂಗಪಡಿಸುತ್ತದೆ:

ಕೃಪೆ: https://www.naturalnews.com