ಅನುಮತಿ ಪಡೆಯದೆ ಕಟ್ಟಡ ಹತ್ತಿದ್ದಕ್ಕೆ ಫ್ರೆಂಚ್ ‘ಸ್ಪೈಡರ್ ಮ್ಯಾನ್’ ರಾಬರ್ಟ್ ಬಂಧನ

0
506

ಸನ್ಮಾರ್ಗ ವಾರ್ತೆ

ಫ್ರಾಂಕ್‍ಫರ್ಟ್,ಸೆ.30: ಗಗನಚುಂಬಿ ಕಟ್ಟಡವನ್ನು ಹತ್ತಲು ಶ್ರಮಿಸಿದ ಫ್ರೆಂಚ್ ಸ್ಪೈಡರ್ ಮ್ಯಾನ್ ಅಲೆಬ್ ರಾಬರ್ಟ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಫ್ರಾಂಕ್‍ಫರ್ಟ್‌ನ ಗಗನಚುಂಬಿ 154 ಮೀಟರ್ ಎತ್ತರದ 42 ಅಂತಸ್ತಿನ ಕಟ್ಟಡವನ್ನು ಕೇವಲ ಗೋಡೆ ಹಿಡಿದು ಹತ್ತಿದ್ದಕ್ಕೆ ಜರ್ಮನಿಯ ಪೊಲೀಸರು ಬಂಧಿಸಿದ್ದಾರೆ.

ಅನುಮತಿಯೂ ಇಲ್ಲದೇ, ಸುರಕ್ಷಾ ಸಲಕರಣೆಗಳೂ ಇಲ್ಲದೆ ಅರ್ಧಗಂಟೆಯಲ್ಲಿ ರಾಬರ್ಟ್ ಇಷ್ಟು ಎತ್ತರದ ಕಟ್ಟಡವನ್ನು ಹತ್ತಿದ್ದರು. ರಾಬರ್ಟ್ ಸ್ಪೈಡರ್ ಮ್ಯಾನ್‍ನಂತೆ ಕಟ್ಟಡ ಹತ್ತುತ್ತಿರುವುದನ್ನು ಹಲವಾರು ಮಂದಿ ಫೋಟೊ ತೆಗೆದಿದ್ದರು.1994ರಿಂದ ಪ್ಯಾರಿಸಿನ ಐಫೆಲ್ ಟವರ್ ಮತ್ತು ದುಬೈನ ಬುರ್ಜ್ ಖಲೀಫಾ ರಾಬರ್ಟ್ ಹತ್ತಿ ದಾಖಲೆ ಸೃಷ್ಟಿಸಿದ್ದಾರೆ. ಪ್ರಜಾಪ್ರಭುತ್ವ ಪರ ಹೋರಾಟ ನಡೆಯುತ್ತಿರುವ ಹಾಂಕಾಂಗಿನ ದೊಡ್ಡ ಕಟ್ಟಡವೊಂದನ್ನು ಆಗಸ್ಟ್‌ನಲ್ಲಿ ರಾಬರ್ಟ್ ಇದೇ ರೀತಿ ಬರಿಗೈಯಲ್ಲಿ ಹತ್ತಿ ಶಾಂತಿಯ ಪತಾಕೆ ಹಾರಿಸಿದ್ದರು.