ಮಂಗಳೂರು; ಅ.1- ಶಾಸಕ ವೇದವ್ಯಾಸ್ ಕಾಮತ್ ರನ್ನು ಭೇಟಿ ಮಾಡಿ, ತಮ್ಮ ಮುಂದಾಳತ್ವದಲ್ಲಿ ಬೆಂಗರೆಗೆ ಮೂಲಭೂತ ಸೌಕರ್ಯ ಒದಗಿಸಬೇಕಾಗಿ ಬೆಂಗರೆ ಗ್ರಾಮಾಭಿವೃದ್ಧಿ ಸಮಿತಿಯಿಂದ ಮನವಿ ಮಾಡಿಕೊಂಡಿತು.
ಸಮಿತಿಯೊಂದಿಗೆ ಮಾತಾಡಿದ ಶಾಸಕರು “ಈ ಯೋಜನೆ ಕೆಲವು ಕೋಟಿಗಳಲ್ಲಿ ಆಗುವುದಿದ್ದರೆ ನಾನೇ ಮಾಡಿಸುತ್ತಿದ್ದೆ. ಇದಕ್ಕೆ 50 ಕೋಟಿಯಷ್ಟು ಮೊತ್ತ ಬೇಕಾಗಿದ್ದು, ಜಿಲ್ಲಾಡಳಿದೊಂದಿಗೆ ಸಮಾಲೋಚಿಸಿ ಏನು ಮಾಡಲು ಸಾಧ್ಯವೋ ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇವೆ ಎಂದು ಭರವಸೆ ನೀಡಿದರು. ಇದೇವೇಳೆ, ದ ಕ ಸಂಸದ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ನಳೀನ್ ಕುಮಾರ್ ರನ್ನು ಸರ್ಕ್ಯೂಟ್ ಹೌಸ್ ನಲ್ಲಿ ಸಮಿತಿಯು ಭೇಟಿ ಮಾಡಿ ತನ್ನ ಬೇಡಿಕೆಯನ್ನು ಇಟ್ಟಿತು. “ಬೆಂಗರೆಗೆ ಡ್ರೈನೇಜ್ ವ್ಯವಸ್ಥೆ, ಪೊಲೀಸ್ ಉಪಠಾಣೆ, ಹೆರಿಗೆ ಆಸ್ಪತ್ರೆ, ಒಳರಸ್ತೆ ಹಾಗೂ ತೋಡುಗಳ ನಿರ್ಮಾಣ ಮುಂತಾದ ಮೂಲಭೂತ ಸೌಕರ್ಯಗಳನ್ನು ಮಾಡಿಸಿ ಕೊಡಬೇಕು” ಎಂದು ಒತ್ತಾಯಿಸಿತು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ನಝೀರ್ ಹುಸೇನ್, ಅಧ್ಯಕ್ಷ ಸಲಾವುದ್ದೀನ್, ಪ್ರಧಾನ ಕಾರ್ಯದರ್ಶಿ ಫೈಝಲ್ ಬಿನ್ ಇಸ್ಮಾಈಲ್, ಉಪಾಧ್ಯಕ್ಷ ಅನ್ವರ್, ಸದಸ್ಯರಾದ ಜಬ್ಬಾರ್, ಹುಸೇನ್ ಸಾಬ್, ರಿಯಾಝ್, ನಝೀರ್, ಆಸಿಫ್, ಶರೀಫ್, ಅಝ್ಮಾಲ್ ಹಾಗೂ ಇಸ್ಮಾಈಲ್ ಭಾಯಿ ಉಪಸ್ಥಿತರಿದ್ದರು.













