ಭಾರತವು ಕಾಶ್ಮೀರವನ್ನು ಆಕ್ರಮಿಸಿಕೊಂಡಿದೆ ಮತ್ತು ವಶಪಡಿಸಿದೆ: ವಿಶ್ವಸಂಸ್ಥೆಯಲ್ಲಿ ಮಲೇಷ್ಯಾದ ಪ್ರಧಾನಿ ಆರೋಪ

0
896

ಸನ್ಮಾರ್ಗ ವಾರ್ತೆ-

ನ್ಯೂಯಾರ್ಕ್; ಅ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ಸಮಸ್ಯೆಯನ್ನು ಎತ್ತಿರುವ ಮಲೇಷ್ಯಾ ಪ್ರಧಾನಿ ಮಹಾತಿರ್ ಮೊಹಮದ್ ಅವರು, ಜಮ್ಮು ಮತ್ತು ಕಾಶ್ಮೀರವನ್ನು ಭಾರತವು “ಆಕ್ರಮಿಸಿದೆ ಮತ್ತು ವಶಪಡಿಸಿಕೊಂಡಿದೆ” ಎಂದು ಹೇಳಿದ್ದಾರೆ ಮತ್ತು ಈ ಸಮಸ್ಯೆಯನ್ನು ಪರಿಹರಿಸಲು ಪಾಕಿಸ್ತಾನದೊಂದಿಗೆ ಕೆಲಸ ಮಾಡುವಂತೆ ಭಾರತವನ್ನು ಆಗ್ರಹಿಸಿದ್ದಾರೆ ಎಂದು https://www.huffingtonpost.in ವರದಿ ಮಾಡಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತತೆಗೆದುಕೊಂಡ ಕ್ರಮಕ್ಕೆ ಕಾರಣಗಳಿರಬಹುದು ಎಂದು ಶುಕ್ರವಾರ ಮಾಡಿದ ಭಾಷಣದಲ್ಲಿ ಹೇಳಿದ ಅವರು, “ಆದರೂ ಈ ಕ್ರಮ ತಪ್ಪು.” ಎಂದಿದ್ದಾರೆ. ವಿಶ್ವಸಂಸ್ಥೆಯ ನಿರ್ಣಯಗಳ ಹೊರತಾಗಿಯೂ, ಜಮ್ಮು ಮತ್ತು ಕಾಶ್ಮೀರವನ್ನು ಭಾರತವು ಆಕ್ರಮಿಸಿದೆ ಮತ್ತು ವಶಪಡಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.

“ವಿಶ್ವಸಂಸ್ಥೆಯನ್ನುನಿರ್ಲಕ್ಷಿಸುವ ಕ್ರಮವು ಇತರರು ವಿಶ್ವಸಂಸ್ಥೆ ಮತ್ತು ಅದರ ನಿಯಮವನ್ನು ಕಡೆಗಣಿಸುವುದಕ್ಕೆ ಅವಕಾಶ ಒದಗಿಸುತ್ತದೆ ಎಂದು ಅವರು ಹೇಳಿದರು. ಈ ಸಮಸ್ಯೆಯನ್ನು ಪರಿಹರಿಸಲು ಭಾರತ ಪಾಕಿಸ್ತಾನದೊಂದಿಗೆ ಕೆಲಸ ಮಾಡಬೇಕು ಎಂದೂ ಅವರು ಹೇಳಿದರು.

ನಂತರ, ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಹಾತಿರ್, ಇತ್ತೀಚಿಗೆ ರಷ್ಯಾದಲ್ಲಿ ನಡೆದ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಮೋದಿಯವರೊಂದಿಗೆ ಮಾತಾಡಿದ್ದೆ ಮತ್ತು ಆಕ್ರಮಣದ ಬದಲು ಮಾತುಕತೆಗಳ ಮೂಲಕ ಕಾಶ್ಮೀರದ ಸಮಸ್ಯೆಗಳನ್ನು ಬಗೆಹರಿಸುವಂತೆ ಅವರಿಗೆ ಸೂಚಿಸಿದ್ದೆ ಎಂದು ಹೇಳಿದರು. ಆಗ ಮೋದಿಯವರು ತಮ್ಮ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಏಕೆ ಹಿಂತೆಗೆದುಕೊಂಡಿದೆ ಎಂದು ವಿವರಿಸಿದ್ದರು ಎಂದರು.

ಭಾರತಕ್ಕೆ ಸಂಘರ್ಷವನ್ನು ಕಡಿಮೆ ಮಾಡಲು ಅಥವಾ ಸಂಘರ್ಷಗಳನ್ನು ತೊಡೆದುಹಾಕಲು ಮಾತುಕತೆ ನಡೆಸಿದ ಅನುಭವ ಇರುವುದರಿಂದ ಕಾಶ್ಮೀರವನ್ನು ಆಕ್ರಮಿಸುವ ಬದಲು ಮಾತುಕತೆಯ ವಿಧಾನವನ್ನು ಏಕೆ ಬಳಸಬಾರದು ಎಂದು ನಾನು ಮೋದಿಯವರಲ್ಲಿ ಪ್ರಶ್ನಿಸಿದೆ ಎಂದವರು ಹೇಳಿದರು.

ಆದರೆ, ನನ್ನ ಮಾತಿಗೆ ಯಾವುದೇ ಬದ್ಧತೆಯನ್ನು ತೋರಲಿಲ್ಲ.ಆದರೆ ಈ ಪ್ರದೇಶದಲ್ಲಿನ ಭಯೋತ್ಪಾದನೆಯ ಸಮಸ್ಯೆಯನ್ನು ಬಗೆಹರಿಸಲು ಅವರು ಮಾತುಕತೆಗಳನ್ನು ಆಶ್ರಯಿಸುತ್ತಾರೆಯೇ ಎಂಬುದು ಅವರನ್ನು ಹೊಂದಿಕೊಂಡಿದೆ ಎಂದು ಅವರು ಹೇಳಿದರು.

ಇಸ್ಲಾಮಿ ಬೋಧಕರಾದ ಜಾಕಿರ್ ನಾಯಕ್ ಅವರು ಮಲೆಷ್ಯಾದಲ್ಲಿದ್ದು, ಅವರನ್ನು ಭಾರತಕ್ಕೆ ಹಸ್ತಾಂತರಿಸುವ ವಿಷಯವು ಎರಡೂ ರಾಷ್ಟ್ರಗಳ ನಡುವೆ ಸುದ್ದಿಯಲ್ಲಿದೆ.