ಸೌದಿ ಅರೇಬಿಯ ವಿರುದ್ಧ ದಾಳಿಯ ವೀಡಿಯೊ ದೃಶ್ಯ ಹೊರಬಿಟ್ಟ ಹೂಥಿಗಳು!

0
466

ಸನ್ಮಾರ್ಗ ವಾರ್ತೆ

ಸನ್‍ಆ,ಅ.1: ಯಮನ್‍ನ ಬಂಡುಕೋರ ವಿಭಾಗವಾದ ಹೂಥಿಗಳು ಸೌದಿ ಅರೇಬಿಯ ವಿರುದ್ಧ ದಾಳಿ ಮಾಡಿದ್ದಾರೆನ್ನಲಾದ ವೀಡಿಯೊ ದೃಶ್ಯಗಳನ್ನು ರವಿವಾರ ಹೂಥಿಗಳು ಹೊರಬಿಟ್ಟಿದ್ದಾರೆ. ಸೌದಿ ವಿರುದ್ಧ ದಾಳಿಯಲ್ಲಿ ಹಲವಾರು ಸಾವುಗಳು ಮತ್ತು 500 ಮಂದಿ ಸೈನಿಕರು ಗಾಯಗೊಂಡಿದ್ದಾರೆ. ಸಾವಿರಾರು ಮಂದಿ ಶರಣಾಗಿದ್ದಾರೆ ಎಂದು ಹೂಥಿಗಳು ಹೇಳಿಕೊಂಡಿದ್ದಾರೆ. ಸೌದಿ ವಿರುದ್ಧ ದಾಳಿ ಗಡಿಯನ್ನು ಮೀರಿ ವ್ಯಾಪಿಸುತ್ತಿದೆ. ನಂತರ ದೇಶದೊಳಗಿರುವ ಸೌದಿ ಮಿತ್ರರ ಸೇನೆಗೆ ದಿಗ್ಬಂಧನ ಹಾಕಿದ್ದೇವೆ ಎಂದು ಹೂಥಿಗಳ ಸೈನಿಕ ವಕ್ತಾರ ಯಹ್ಯಾ ಸಾರಿ ಹೇಳಿದರು.

ಡ್ರೋನ್, ಮಿಸೈಲುಗಳ ದಾಳಿಯಿಂದ ರಕ್ಷಣೆ ಹೊಂದಲು ಮತ್ತು ಶರಣಾಗಲು ಶ್ರಮಿಸಿದ 200ಕ್ಕೂ ಹೆಚ್ಚು ಮಂದಿ ಹತ್ಯೆಯಾಗಿದ್ದಾರೆ ಎಂದು ಸಾರಿ ತಿಳಿಸಿದ್ದಾರೆ. ಸ್ಫೋಟದಿಂದ ನಾಶಪಡಿಸಲಾದ ಸೇನೆಯ ವಾಹನಗಳು, ಶರಣಾದ ಸೈನಿಕರನ್ನು ತೋರಿಸುವ ದೃಶ್ಯಗಳನ್ನು ಹೂಥಿಗಳು ಹೊರಗೆ ಬಿಟ್ಟಿದ್ದಾರೆ. ನಜ್ರಾನ್‍ನ ದಕ್ಷಿಣ ಪ್ರದೇಶದಲ್ಲಿ ಹೋರಾಟ ನಡೆಯುತ್ತಿದೆ. ಹೂಥಿಗಳ ಹೇಳಿಕೆಗೆ ಸೌದಿ ಅರೇಬಿಯ ಈವರೆಗೂ ಪ್ರತಿಕ್ರಿಯಿಸಿಲ್ಲ.