ಸನ್ಮಾರ್ಗ ವಾರ್ತೆ
ಸನ್‍ಆ,ಅ.1:ನಿಶ್ಶರ್ತವಾಗಿ 350 ಕೈದಿಗಳನ್ನು ಬಿಟ್ಟು ಕಳುಹಿಸಲಾಗಿದೆ ಎಂದು ಹೂಥಿ ಬಂಡುಕೋರರು ಹೇಳಿದ್ದಾರೆ. ಸೌದಿ ಅರೇಬಿಯದ ಸಾವಿರಾರು ಸೈನಿಕರು ಶರಣಾಗಿದ್ದಾರೆ ಎಂದು ಹೇಳಿದ ಬೆನ್ನಿಗೆ ಯಮನ್‍ನ ಹೂತಿಗಳು ತಮ್ಮ ಅಧಿಕೃತ ಟಿವಿ ಅಲ್ ಮಾಸಿರಾಹ್ ಕೈದಿಗಳ ಬಿಡುಗಡೆಯ ಕುರಿತ ವರದಿಯನ್ನು ಪ್ರಸಾರ ಮಾಡಿಸಿದ್ದಾರೆ.
ಡಿಸೆಂಬರ್‍ನಲ್ಲಿ ಸ್ಟಾಕ್ ಹೋಮ್‍ನಲ್ಲಿ ನಡೆದ ಒಪ್ಪಂದದ ಪ್ರಕಾರ ಕೈದಿಗಳನ್ನು ಹಸ್ತಾಂತರಿಸುವುದನ್ನು ಬಿಡುಗಡೆಗೊಳಿಸಲಾಗಿದೆ ಎಂದು ಹೂಥಿ ವಕ್ತಾರ ಅಬ್ದುಲ್ ಕಾದರ್ ಅಲ್ ಮುರ್‍ದತ ತಿಳಿಸಿದರು. ಸ್ವೀಡನ್ ಒಪ್ಪಂದದಿಂದ ಏನನ್ನೂ ಗಳಿಸಲು ಆಗಲಿಲ್ಲ ಎಂದು ಅವರು ಹೇಳಿದರು.
ಹೂಥಿ ಬಂಡುಕೋರರು ಮತ್ತು ಯಮನ್ ಸರಕಾರಗಳ ನಡುವೆ ಒಪ್ಪಂದ ನಡೆದಿತ್ತು. ಕೈದಿಗಳ ಬಿಡುಗಡೆ ಯಮನ್ ಸರಕಾರವನ್ನು ಬೆಂಬಲಿಸುವ ಸೌದಿ-ಯುಎಇ ಸಖ್ಯಕ್ಕೆ ಶುಭ ಸೂಚನೆಯಾಗಿದೆ ಎಂದು ಇರಾನ್‍ನೊಂದಿಗೆ ಸಂಬಂಧ ಹೊಂದಿರುವ ಹೂಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












