ಸನ್ಮಾರ್ಗ ವಾರ್ತೆ
ಮುಂಬೈ,ಅ.2: ಶಬರಿಮಲೆಗೆ ಯುವತಿಯರ ಪ್ರವೇಶಕ್ಕೆ ಅನುಮತಿ ನೀಡಿದ ತೀರ್ಪಿನ ನಂತರ ನನಗೆ
ಬೆದರಿಕೆಯೊಡ್ಡಲಾಗಿತ್ತು ಎಂದು ಸುಪ್ರೀಂಕೋರ್ಟಿನ ಜಸ್ಟಿಸ್ ಡಿ.ವೈ.ಚಂದ್ರಚೂಡ ಮುಂಬೈಯ ಒಂದು ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ.
ತೀರ್ಪಿನ ಬೆನ್ನಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬೆದರಿಕೆ, ಆಕ್ಷೇಪ ಇತ್ತು. ಸಾಮಾಜಿಕ ಮಾಧ್ಯಮಗಳ ಸಂದೇಶಗಳನ್ನು ಓದಬೇಡಿ ಎಂದು ತನ್ನ ಜೊತೆ ಕೆಲಸ ಮಾಡುವ ಲಾ ಕ್ಲರ್ಕ್‌ಗಳು, ಇಂಟರ್ನ್‌ಗಳು ಹೇಳಿದರು. ಶಬರಿಮಲೆಗೆ ಯುವತಿಯರ ಪ್ರವೇಶ ತೀರ್ಪಿನಲ್ಲಿ ಈಗಲೂ ದೃಢವಾಗಿದ್ದೇನೆ ಎಂದು ಚಂದ್ರಚೂಡ ಹೇಳಿದರು.
ಮಹಿಳೆಯರನ್ನು ದೂರವಿಡುವುದು ಅಸ್ಪೃಶ್ಯತೆಗೆ ಸಮಾನವಾಗಿದೆ. ಮಹಿಳೆಯರಿಗೆ ಆರಾಧಾನ ಸ್ವಾತಂತ್ರ್ಯದ ಭರವಸೆ ಕೊಡುವ ಸಂವಿಧಾನ ಬದ್ಧ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.












