ನಿಮಗೆ ಸಂವಿಧಾನ ಅಲರ್ಜಿ, ಒಮ್ಮೆಯಾದರೂ ಅದನ್ನು ಓದಿ ನೋಡಿ- ಅಮಿತ್‍ ಶಾಗೆ ಉವೈಸಿ ಸಲಹೆ

0
869

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.2: ದೇಶಾದ್ಯಂತ ಪೌರತ್ವ ಪಟ್ಟಿಯನ್ನು ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಅಮಿತ್ ಶಾರ ಹೇಳಿಕೆಗೆ ಕಟುವಾಗಿ ಟೀಕಿಸಿದ ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿ ಸಂವಿಧಾನ ನಿಮಗೆ ಅಲರ್ಜಿಯಾಗಿದೆ, ಒಮ್ಮೆಯಾದರೂ ಅದನ್ನು ಓದಿನೋಡಿ” ಎಂದು ಆರೋಪಿಸಿದ್ದಾರೆ.

ಗೃಹ ಸಚಿವರಿಗೆ ರಾಷ್ಟ್ರೀಯ ಪೌರತ್ವ ಪಟ್ಟಿಗೆ ಹೆದರಬೇಕಾದವರು ಮುಸ್ಲಿಮರು ಎಂದು ನನಗೆ ಗೊತ್ತಿದೆ. ಆದರೆ, ಒಂದು ಸಲ ನೀವು ನಿಮ್ಮ ಅಲರ್ಜಿಯನ್ನು ಬದಿಗಿಟ್ಟು ಸಂವಿಧಾನವನ್ನು ಓದಿ ನೋಡಿ ಎಂದು ಉವೈಸಿ ಟ್ವೀಟ್ ಮಾಡಿದ್ದಾರೆ. ಪೌರತ್ವದ ಬುನಾದಿ ಮಾತ್ರವಲ್ಲ ಅದು ಸಂವಿಧಾನ ವಿರೋಧಿ, ಕಾನೂನು ವಿರೋಧಿಯಾಗಿದೆ ಎಂಬುದು ಗೊತ್ತಾಗುತ್ತದೆ ಎಂದು ಉವೈಸಿ ಹೇಳಿದರು.

ಅನಧಿಕೃತ ವಲಸೆಗಾರರಲ್ಲಿ ಯಾರನ್ನೂ ದೇಶದಲ್ಲಿ ವಾಸಿಸಲು ಬಿಡುವುದಿಲ್ಲ ಎನ್ನುತ್ತಾರೆ. ಅಂದರೆ ನಿರಾಶ್ರಿತರಾದ ಹಿಂದೂ ಸಿಖ್, ಬುದ್ಧ, ಕ್ರೈಸ್ತ ವಿಭಾಗಗಳನ್ನು ಬಲವಂತದಿಂದ ಹೊರದಬ್ಬುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. ಇಡೀ ದೇಶದಲ್ಲಿ ಪೌರತ್ವ ಪಟ್ಟಿಯನ್ನು ಜಾರಿಗೆ ತರಲಾಗುವುದು. ಈ ವಿಷಯದಲ್ಲಿ ಅಪಪ್ರಚಾರಗಳನ್ನು ನಂಬಬೇಡಿ. ಪೌರತ್ವ ತಿದ್ದುಪಡಿ ಮಸೂದೆ ನಿರಾಶ್ರಿತರಾದ ಹಿಂದೂ, ಸಿಖ್, ಬುದ್ಧ, ಕ್ರೈಸ್ತ ವಿಭಾಗಗಳ ಪೌರತ್ವವನ್ನು ದೃಢಪಡಿಸುತ್ತದೆ. ಇದು ಬಿಜೆಪಿಯ ಭರವಸೆ ಎಂದು ಬಿಜೆಪಿಯ ರ‌್ಯಾಲಿಯಲ್ಲಿ ಅಮಿತ್ ಶಾ ಕೊಲ್ಕತಾದಲ್ಲಿ ಹೇಳಿದ್ದರು.