ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.3: ಜಮ್ಮು-ಕಾಶ್ಮೀರದಲ್ಲಿ 370 ವಿಧಿ ರದ್ದು ಪಡಿಸಿದ ನಂತರ 144 ಮಕ್ಕಳನ್ನು ಬಂಧಿಸಲಾಗಿದ್ದರೂ ನಂತರ 142 ಮಕ್ಕಳನ್ನು ಬಿಟ್ಟು ಕಳುಹಿಸಲಾಗಿದ್ದು, ಇಬ್ಬರನ್ನು ಜುವೈನಲ್ ಹೋಂಗೆ ಕಳುಹಿಸಲಾಗಿದೆ ಎಂದು ಜಮ್ಮು-ಕಾಶ್ಮೀರ ಹೈಕೋರ್ಟಿನ ಜುವೈನಲ್ ಜಸ್ಟಿಸ್ ಕಮಿಟಿ ಸುಪ್ರೀಂ ಕೋರ್ಟಿಗೆ ತಿಳಿಸಿದೆ. ಇದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟಿನಲ್ಲಿ ಇನಾಕ್ಷಿ ಗಂಗೂಲಿ, ಶಾಂತ ಸಿನ್ಹಾ ಅರ್ಜಿ ಸಲ್ಲಿಸಿದ್ದರು. ಇವರ ವಕೀಲರಾದ ಹುಸಫ ಅಹ್ಮದ್ರಿಗೆ, ಜಸ್ಟಿಸ್ ಎನ್.ವಿ.ರಮಣ, ಎಂ.ಆರ್.ಶಾ, ಬಿ.ಆರ್.ಗವಾಯ್ರ ಪೀಠ ಈ ವಿಷಯವನ್ನು ತಿಳಿಸಿದೆ. ಮಕ್ಕಳು ಬಂಧಿಯಾಗಿದ್ದಾರೆ ಎಂಬ ವಿಷಯವನ್ನು ಕಮಿಟಿ ನಿರಾಕರಿಸಿದೆ ಎಂದು ಕೋರ್ಟು ತಿಳಿಸಿತು.
ಆದರೆ, ಕಮಿಟಿಯ ವರದಿಯಲ್ಲಿ ಉತ್ತರಿಸಲು ಅಹ್ಮದ್ ಅನುಮತಿ ಕೇಳಿದ್ದು, ಕೋರ್ಟು ಎರಡು ವಾರದ ಬಳಿಕ ವಾದ ಆಲಿಸಲಾಗುವುದು ಎಂದು ತಿಳಿಸಿದೆ. ಹೋರಾಟಗಾರ್ತಿಯರ ಅರ್ಜಿಯಲ್ಲಿ ಸುಪ್ರೀಂಕೋರ್ಟು ಕಮಿಟಿಯಲ್ಲಿ ವರದಿಯನ್ನು ಕೇಳಿತ್ತು. ಜಸ್ಟಿಸ್ ಅಲಿ ಮುಹಮ್ಮದ್ ಮಗ್ರೊರ ನೇತೃತ್ವದ ಕಮಿಟಿ ಕೋರ್ಟು, ಪೊಲೀಸ್ ಮುಖ್ಯಸ್ಥರು, ವಿವಿಧ ಏಜೆನ್ಸಿಗಳಿಂದ ವಿವರ ಸಂಗ್ರಹಿಸಿ ಸುಪ್ರೀಂಕೋರ್ಟಿಗೆ ವರದಿ ನೀಡಿದೆ. ಮಕ್ಕಳನ್ನೂ ಜೈಲಿಗೆ ಹಾಕಲಾಗಿದೆ ಎಂದು ವಿದೇಶಿ ಮಾಧ್ಯಮಗಳಲ್ಲಿ ಬಂದ ವರದಿ ವಾಸ್ತವಕ್ಕೆ ದೂರವಾದದ್ದು ಎಂದು ಡಿಜಿಪಿ ವಿವರಿಸಿದ್ದಾರೆ.
ಆಗಸ್ಟ್ ಐದರಿಂದ ಶ್ರೀನಗರದ ಹರ್ವಾನಿ ಜಮ್ಮುವಿನ ಆರ್ಎಸ್ಪೊರದಲ್ಲಿ ಎರಡು ನಿಗಾ ವಸತಿಗಳನ್ನು ಸ್ಥಾಪಿಸಿ ಮುವತ್ತಾರು ಮಕ್ಕಳನ್ನು ಹರ್ವಾನಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. 21 ಮಂದಿಗೆ ನಂತರ ಜಾಮೀನು ನೀಡಲಾಗಿತ್ತು. ಹದಿನೈದು ಮಂದಿಯ ವಿಷಯದಲ್ಲಿ ತನಿಖೆ ನಡೆಯುತ್ತಿದೆ ಎಂದು ಜವೈನಲ್ ಜಸ್ಟಿಸ್ ಕಮಿಟಿ ಸುಪ್ರೀಂಕೋರ್ಟಿಗೆ ತಿಳಿಸಿದೆ.
ಆರ್ಎಸ್ಪುರದಲ್ಲಿ ಹತ್ತು ಮಕ್ಕಳನ್ನು ಕಳುಹಿಸಲಾಗಿತ್ತು. ಇವರಲ್ಲಿ ಆರು ಮಂದಿಯನ್ನು ಬಿಟ್ಟುಬಿಡಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಇದೇ ವೇಳೆ ಜಮ್ಮು-ಕಾಶ್ಮೀರದಿಂದ ಬಂಧಿಸಿ ಉತ್ತರಪ್ರದೇಶ ಜೈಲಿಗೆ ಹಾಕಿದ ಮಕ್ಕಳ ಮೇಲೆ ಹೊರಿಸಿದ ಸಾರ್ವಜನಿಕ ಸುರಕ್ಷಾ ಕಾನೂನು ರದ್ದುಪಡಿಸಲಾಗಿದೆ ಎಂದು ಕಾಶ್ಮೀರ ಸರಕಾರ ಹೈಕೋರ್ಟಿಗೆ ತಿಳಿಸಿದೆ. ಮಕ್ಕಳನ್ನು ಜೈಲಿಗೆ ಹಾಕಿದ ದೂರಿನಲ್ಲಿ ಸುಪ್ರೀಂಕೋರ್ಟಿನ ನಿರ್ದೇಶನದ ಪ್ರಕಾರ ತನಿಖೆ ನಡೆಸುತ್ತಿರುವ ಜಸ್ಟಿಸ್ ಅಲಿ ಮುಹಮ್ಮದ್ ಮಗ್ರೆಯವರ ಮುಂದೆ ಮಕ್ಕಳನ್ನು ಜೈಲಿಗೆ ಹಾಕಿದ ವಿವರವನ್ನು ಜಮ್ಮು-ಕಾಶ್ಮೀರ ಸರಕಾರ ದೃಢಪಡಿಸಿದ್ದು ಅನಂತನಾಗ್ ಜಿಲ್ಲೆಯ ಶ್ರೀಗುಫ್ವಾರದ ಮಕ್ಕಳ ಹೆತ್ತವರು ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ವಿವರವನ್ನು ಸರ್ಕಾರ ತಿಳಿಸಿದೆ.
ಆಗಸ್ಟ್ ನಾಲ್ಕರಂದು ಮಕ್ಕಳನ್ನು ಮನೆಯಿಂದ ಪೊಲೀಸರು ಬಂಧಿಸಿ ಕರೆದೊಯ್ದಿದ್ದರು. ಆಗಸ್ಟ್ ಎಂಟಕ್ಕೆ ಪಿಎಸ್ಎ ಕಾನೂನು ಹೊರಿಸಿ ಉತ್ತರಪ್ರದೇಶ ಜೈಲಿಗೆ ಕರೆದುಕೊಂಡು ಹೋಗಲಾಗಿತ್ತು. ನಂತರ ಮಕ್ಕಳ ಜನನ ದಿನಾಂಕ ಸೂಚಿಸುವ ಹತ್ತನೆಯ ತರಗತಿಯ ಸರ್ಟಿಫಿಕೆಟ್ ಹೈಕೋರ್ಟಿನಲ್ಲಿ ಹಾಜರು ಪಡಿಸಿದ್ದರು. ಅವರಿಗೆ ಹದಿನಾರು ವರ್ಷ ವಯಸ್ಸು ಎಂದು ತಿಳಿದು ಬಂದಿತ್ತು. ನಂತರ ಕೋರ್ಟ್ ರಾಜ್ಯ ಕೌನ್ಸಿಲ್ನಲ್ಲಿ ವಿವರಣೆ ಕೇಳಿತ್ತು. ಮಂಗಳವಾರ ಕೇಸು ಪರಿಗಣಿಸಿದಾಗ ಮಕ್ಕಳ ಮೇಲೆ ಹೊರಿಸಿದ ಪಿಎಸ್ಎ ರದ್ದುಪಡಿಸಲಾಗಿದೆ ಎಂದು ಕೌನ್ಸಿಲ್ ತಿಳಿಸಿದೆ.












