ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.3: ಗಡಿ ನುಸುಳಿದ ಜೈಷ್ ಮುಹಮ್ಮದ್ ಭಯೋತ್ಪಾದಕರು ದಿಲ್ಲಿಗೆ ಬಂದಿದ್ದಾರೆ ಎಂದು ಇಂಟಲಿಜೆನ್ಸ್ ಮುನ್ನೆಚ್ಚರಿಕೆ ನೀಡಿದ್ದು ದೆಹಲಿಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ರಾಜಧಾನಿಯ ವಿವಿಧ ಕಡೆಗಳಲ್ಲಿ ದೆಹಲಿ ಪೊಲೀಸರ ವಿಶೇಷ ದಳ ಶೋಧ ನಡೆಸುತ್ತಿದೆ. ಬುಧವಾರ ರಾತ್ರೆಯಿಂದ ಪೊಲೀಸ್ ಸ್ಪೆಷಲ್ ಸೆಲ್ ದಾಳಿ ಆರಂಭಿಸಿದೆ. ಜೈಷ್‍ನ ಮೂವರು ಭಯೋತ್ಪಾದಕರು ಭಾರತದೊಳಗೆ ನುಸುಳಿದ್ದು ದಿಲ್ಲಿಗೆ ತಲುಪಿದ್ದಾರೆ ಎಂದು ಗುಪ್ತಚರ ವಿಭಾಗ ಮುನ್ನೆಚ್ಚರಿಕೆ ನೀಡಿದೆ.
ಭಯೋತ್ಪಾದನಾ ದಾಳಿಯ ಮುನ್ನೆಚ್ಚರಿಕೆಯಿಂದ ಕಾಶ್ಮೀರ, ಪಂಜಾಬ್‍ನಲ್ಲಿ ಸುರಕ್ಷೆ ಬಿಗಿಗೊಳಿಸಲಾಗಿದೆ. ಅಮೃತಸರ, ಪಠಾಣ್‌ಕೊಟ್, ಶ್ರೀನಗರಗಳ ವಾಯುಸೇನೆಯ ನೆಲೆಗಳಲ್ಲಿಯೂ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಜಮ್ಮು, ಅವಂತಿಪುರ, ಪಠಾಣ್‍ಕೋಟ್, ಹಿಂಡಾನ್ ವ್ಯೋಮ ನೆಲಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.












