ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.3: ದಿಲ್ಲಿಯಿಂದ ಜಮ್ಮು-ಕಾಶ್ಮೀರದ ಕತ್ರಕ್ಕೆ ಸೆಮಿ-ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಗೃಹ ಸಚಿವ ಅಮಿತ್ ಶಾ ಫ್ಲಾಗ್ ಆಫ್ ಮಾಡಿ ಉದ್ಘಾಟಿಸಿದರು.
ಪ್ರವಾಸಿ ಕ್ಷೇತ್ರದ ಬೆಳವಣಿಗೆಯ ಗುರಿಯಿರಿಸಿ ದಿಲ್ಲಿಯಿಂದ ಜಮ್ಮು-ಕಾಶ್ಮೀರಕ್ಕೆ ವೈಷ್ಣವದೇವಿ ದೇವಸ್ಥಾನಕ್ಕಾಗಿ ಈ ರೈಲು ಸಂಚರಿಸಲಿದೆ. ಹತ್ತು ವರ್ಷದಲ್ಲಿ ಜಮ್ಮು-ಕಾಶ್ಮೀರವನ್ನು ಭಾರತದ ಅತ್ಯಂತ ಅಭಿವೃದ್ಧಿ ಹೊಂದಿದ ರಾಜ್ಯ ಮಾಡುತ್ತೇವೆ ಎಂದು ಅಮಿತ್ ಶಾ ಹೇಳಿದರು.
ಮಹಾತ್ಮ ಗಾಂಧಿಯ ಸ್ವದೇಶಿ ಆಶಯದಂತೆ ರೈಲನ್ನು ಭಾರತದಲ್ಲಿಯೇ ನಿರ್ಮಿಸಲಾಗಿದೆ ಮೇಕ್ ಇನ್ ಇಂಡಿಯಾ ಯೋಜನೆಯ ಅಂಗವಾಗಿ ಪೂರ್ಣ ಸ್ವದೇಶಿ ನಿರ್ಮಾಣವಿದು ಮತ್ತು ರೈಲಿನ ಹದಿನೆಂಟು ವಿಭಾಗಕ್ಕೆ ಸೇರಿದೆ ಎಂದು ಅಮಿತ್ ಶಾ ಹೇಳಿದರು.
ಸಾಧಾರಣವಾಗಿ ರೈಲಿನಲ್ಲಿ ದಿಲ್ಲಿಯಿಂದ ಕತ್ರಕ್ಕೆ ಹೋಗಲು ಹನ್ನೆರಡು ತಾಸಿನ ಪ್ರಯಾಣವಿದೆ. ವಂದೇ ಭಾರತ್ಗೆ ಎಂಟು ಗಂಟೆ ಸಾಕು. ಗಂಟೆಗೆ 180 ಕಿಲೊಮೀಟರ್ ವೇಗದಲ್ಲಿ ಇದು ಸಂಚರಿಸಲಿದೆ. ಹದಿನಾರು ಬೋಗಿಗಳು ವಂದೇ ಭಾರತ್ ನಲ್ಲಿದೆ. ಪ್ರತಿಯೊಂದು ಬೋಗಿಯಲ್ಲಿ ಸಿಸಿಟಿವಿ ಇರಿಸಲಾಗಿದೆ. 97 ಕೋಟಿ ರೂಪಾಯಿ ವೆಚ್ಚದಲ್ಲಿ ಚೆನ್ನೈಯ ಇಂಗ್ರಲ್ ಫ್ಯಾಕ್ಟರಿಯಲ್ಲಿ ಹವಾನಿಯಂತ್ರಿತ ರೈಲು ನಿರ್ಮಾಣವಾಗಿದೆ.












