ಗುಜರಾತ್: ದೇವಸ್ಥಾನಕ್ಕೆ ಉತ್ಸವ ನೋಡಲು ಬಂದ ದಲಿತ ಯುವಕನ ಹತ್ಯೆ

0
1210

ಸನ್ಮಾರ್ಗ ವಾರ್ತೆ

ಅಹ್ಮದಾಬಾದ್,ಅ.5: ಗುಜರಾತಿನ ಆನಂದ್ ಜಿಲ್ಲೆಯಲ್ಲಿ ಮಂದಿರದಲ್ಲಿ ‘ಗರ್‌ಭ’ ಉತ್ಸವ ನೋಡಲು ಬಂದ ದಲಿತ ಯುವಕನನ್ನು ಪಟೇಲ್ ಸಮುದಾಯದ ಗುಂಪೊಂದು ಹೊಡೆದು ಕೊಂದಿದೆ. ಜಯೇಶ್ ಸೋಳಂಕಿ ಎನ್ನುವ 21 ವರ್ಷದ ಯುವಕ ಕೊಲೆಯಾಗಿದ್ದಾನೆ. ಜಯೇಶ್‌ನ ಸಂಬಂಧಿಕ ಹಾಗೂ ಇನ್ನೂ ಇತರ ಇಬ್ಬರ ಮೇಲೆ ಹಲ್ಲೆ ನಡೆದಿದ್ದು ಅವರು ಗಾಯಗೊಂಡು ಮಂದಿರದ ಬಳಿ ಕುಳಿತಿದ್ದರು. ಮೇಲ್ವರ್ಗದ ಗುಂಪು ನಿಂದಿಸಿ ಕ್ರೂರವಾಗಿ ಹೊಡೆದಿದೆ. ಕಳೆದ ರವಿವಾರ ಬೆಳಗ್ಗೆ ನಡೆದ ಘಟನೆಯಲ್ಲಿ ಎಂಟು ಮಂದಿಯ ವಿರುದ್ಧ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.