ಹ್ಯಾಮರ್ ತಲೆಗೆ ಬಿದ್ದು ವಿದ್ಯಾರ್ಥಿಗೆ ಗಂಭೀರ ಗಾಯ

0
538

ಸನ್ಮಾರ್ಗ ವಾರ್ತೆ

ಕೋಟ್ಟಯಂ,ಅ,4: ಕ್ರೀಡೆಯೊಂದರಲ್ಲಿ ಸುತ್ತಿಗೆ ತಲೆಗೆ ಬಿದ್ದ ಪರಿಣಾಮವಾಗಿ ವಿದ್ಯಾರ್ಥಿಯೊಬ್ಬ ಗಂಭೀರ ಗಾಯಗೊಂಡಿದ್ದಾನೆ. ಅಥ್ಲೆಟಿಕ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಜೂನಿಯರ್ ಅಥ್ಲೆಟಿಕ್ ಮೀಟ್‍ನಲ್ಲಿ ಘಟನೆ ನಡೆದಿದೆ. ಪಾಲ ಸೇಂಟ್ ಥಾಮಸ್ ಹೈಯರ್ ಸೆಕಂಡರಿ ಸ್ಕೂಲ್‌ನ ಪ್ರಥಮ ಪಿಯುಸಿ ವಿದ್ಯಾರ್ಥಿ ಆಸಿಲ್ ಜಾನ್ಸನ್ ಗಾಯಗೊಂಡ ವಿದ್ಯಾರ್ಥಿಯಾಗಿದ್ದು ಕೋಟ್ಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಅವನನ್ನು ಸೇರಿಸಲಾಗಿದೆ.

ಜಾವೆಲಿನ್ ಥ್ರೋ- ಹ್ಯಾಮರ್ ಥ್ರೋ ಸ್ಪರ್ಧೆ ಗ್ರೌಂಡಿನಲ್ಲಿ ಆಸಿಲ್ ಜಾವ್‍ಲಿನ್ ಥ್ರೋ ಸ್ಪರ್ಧೆಯ ವೇಳೆ ಬಂದಿದ್ದ. ಜಾವ್ಲಿನ್ ಥ್ರೋ ಸ್ಪರ್ಧೆಯಲ್ಲಿ ಕ್ರೀಡಾಪಟು ಎಸೆದ ಜಾವಲಿನ್ ಉದ್ದ ಅಳತೆ ಮಾಡುವಾಗ ಗ್ರೌಂಡ್‍‌ನಲ್ಲಿ ಆಸಿಲ್ ಮೇಲೆ ಹ್ಯಾಮರ್ ಬಿತ್ತು.