ಸನ್ಮಾರ್ಗ ವಾರ್ತೆ
ಜೈಪುರ,ಅ.7: ರಾಜಸ್ತಾನದ ಅಲ್ವಾರಿನಲ್ಲಿ ಮುಸ್ಲಿಂ ದಂಪತಿಗೆ ಜೈ ಶ್ರೀ ರಾಮ್ ಹೇಳಲು ಬಲವಂತ ಪಡಿಸಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಮಹಿಳೆಯ ಮೇಲೆ ಅಕ್ರಮವೆಸಗಿದ ಆರೋಪವನ್ನು ಆರೋಪಿಗಳ ವಿರುದ್ಧ ದಾಖಲಿಸಿಕೊಳ್ಳಲಾಗಿದೆ. ಶನಿವಾರ ರಾತ್ರೆ 11.30ಕ್ಕೆ ಅಲ್ವಾರ್ ಬಸ್ ಸ್ಟಾಂಡಿನಲ್ಲಿ ಘಟನೆ ನಡೆದಿದೆ.
ಹರಿಯಾಣದ ಮುಸ್ಲಿಂ ದಂಪತಿಗಳು ಬಸ್ಗಾಗಿ ಕಾಯುತ್ತಿದ್ದಾಗ ಬೈಕ್ನಲ್ಲಿ ಬಂದ ಇಬ್ಬರು ಯುವಕರು ಜೈ ಶ್ರೀ ರಾಮ್ ಹೇಳಲು ಬಲವಂತಪಡಿಸಿದರು. ಒಬ್ಬ ಮಹಿಳೆಯ ಮೇಲೆ ಕೈ ಹಾಕಲು ಯತ್ನಿಸಿದ್ದಾನೆ ಎಂದು ಪೊಲೀಸರು ಎಫ್ಐಆರ್ನಲ್ಲಿ ತಿಳಿಸಿದ್ದಾರೆ.
ಸ್ಥಳದಲ್ಲಿದ್ದವರು ಪೊಲೀಸರಿಗೆ ಕರೆ ಮಾಡಿದ್ದು ಅಲ್ಲಿಗೆ ಧಾವಿಸಿದ ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸಿದರು. ವಂಶ್ ಭಾರಧ್ವಾಜ್(23), ಸುರೇಂದ್ರ ಮೋಹನ್ ಭಾಟಿ(32) ಎಂಬವರು ಆರೋಪಿಗಳಾಗಿದ್ದು ಇಬ್ಬರನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಲಾಗಿದ್ದು, ಕೋರ್ಟು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಇಬ್ಬರೂ ಕ್ರಿಮಿನಲ್ ಪ್ರಕರಣದ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.












