ಗುರು ರವಿದಾಸ್ ಮಂದಿರ ಮರುನಿರ್ಮಾಣಕ್ಕೆ ಬೇರೆ ಸ್ಥಳ ಹುಡುಕಿ- ಸುಪ್ರೀಂಕೋರ್ಟು ಆಜ್ಞೆ

0
892

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.5:ತುಗ್ಲಕಾಬಾದಿನಲ್ಲಿ ಕೆಡವಲಾದ ಗುರು ರವಿದಾಸ್ ಮಂದಿರವನ್ನು ಬೇರೊಂದು ಸ್ಥಳದಲ್ಲಿ ನಿರ್ಮಿಸಬೇಕೆಂದು ಎಂದು ಕೋರ್ಟು ಆದೇಶಿಸಿದೆ.
ಗುರು ರವಿದಾಸ್ ಮಂದಿರಕ್ಕೆ ಸಂಬಂಧಿಸಿದವರೊಂದಿಗೆ ಸೇರಿ ಅವರ ಅಭಿಪ್ರಾಯವನ್ನು ಪಡೆದು ಬೇರೊಂದು ಕಡೆಯಲ್ಲಿ ಮರು ನಿರ್ಮಾಣ ಮಾಡಬೇಕು.

ತುಗ್ಲಕಾಬಾದಿನ ಅರಣ್ಯ ಪ್ರದೇಶದಲ್ಲಿ ಬರುತ್ತದೆ ಎನ್ನುವ ಕಾರಣದಿಂದ ಆಗಸ್ಟ್ ಹತ್ತರಂದು ಸುಪ್ರೀಂಕೋರ್ಟಿನ ಆದೇಶದಂತೆ ರವಿದಾಸ್ ಮಂದಿರವನ್ನು ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ ಕೆಡವಿತ್ತು.

ಎಲ್ಲರ ಭಾವನೆಗಳನ್ನು ಗೌರವಿಸಲಾಗುವುದು. ಆದರೆ, ನೀವು ಕಾನೂನು ಅನುಸರಿಸಲು ಬಾಧ್ಯಸ್ಥರು ಎಂದು ಜಸ್ಟಿಸ್ ಅರುಣ್ ಮಿಶ್ರ, ಎಸ್.ರವೀಂದ್ರಭಟ್‌ರ ಸುಪ್ರೀಂಕೋರ್ಟ್ ಪೀಠ ತಿಳಿಸಿದೆ.

ಮಂದಿರವನ್ನು ಅದೇ ಸ್ಥಳದಲ್ಲಿ ಮರು ನಿರ್ಮಿಸಬೇಕೆಂದು ಮಾಜಿ ಸಂಸದರಾದ ಆಶೋಕ್ ತನ್‍ವಾರ್, ಪ್ರದೀಪ್ ಜೈನ್ ಆದಿತ್ಯ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. 500 ವರ್ಷಗಳಿಂದ ಆರಾಧಿಸುತ್ತಾ ಬಂದ ಸ್ಥಳ ಎಂದು ಅರ್ಜಿದಾರರು ಸೂಚಿಸಿದ್ದರು. ಮಂದಿರ ಕೆಡವಿದ್ದರ ವಿರುದ್ಧ ದಿಲ್ಲಿಯಲ್ಲಿ ಸಾವಿರಾರು ಮಂದಿ ಭಾಗವಹಿಸಿ ಪ್ರತಿಭಟನಾ ರ‌್ಯಾಲಿ ನಡೆಯಿತು.ಇದಲ್ಲದೇ ಪಂಜಾಬ್, ಹರಿಯಾಣ ರಾಜ್ಯಗಳಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ನಂತರ ಕೋರ್ಟು ಆದೇಶಕ್ಕೆ ರಾಜಕೀಯ ಬಣ್ಣ ನೀಡಬೇಡಿ ಎಂದು ಸುಪ್ರೀಂಕೋರ್ಟು ಹೇಳಿತ್ತು.