ಟುನಿಷ್ಯ ಚುನಾವಣೆ; ಗೆಲುವಿನ ನಿರೀಕ್ಷೆ ಅನ್ನಹದ್ ಪಾರ್ಟಿ

0
525

ಸನ್ಮಾರ್ಗ ವಾರ್ತೆ

ಟ್ಯುನಿಷ್ಯ,ಅ.7:ಪಾರ್ಲಿಮೆಂಟು ಚುನಾವಣೆ ಟುನಿಷ್ಯಾದಲ್ಲಿ ನಡೆಯುತ್ತಿದ್ದು ನವೆಂಬರ್ ಹದಿನೇಳಕ್ಕೆ ಅಧಿಕೃತ ಫಲಿಂತಾಶ ಪ್ರಕಟಗೊಳ್ಳಲಿದೆ. ಪ್ರಥಮ ಫಲಿತಾಂಶ ಈ ತಿಂಗಳು ಹತ್ತಕ್ಕೆ ತಿಳಿಯಬಹುದು. ಹೊಸ ಪ್ರಧಾನಿ ಆಯ್ಕೆ ಪ್ರಕ್ರಿಯೆ ಮತ್ತು ಸಚಿವ ಸಂಪುಟ ರೂಪಿಸಲು ಎರಡು ತಿಂಗಳ ಸಮಯಾವಕಾಶ ಇದೆ. 217 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. 15,000 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಫಲಿತಾಂಶ ಪೂರ್ವ ಸಮೀಕ್ಷೆಯನ್ನು ಟುನಿಷ್ಯಾದಲ್ಲಿ ನಿಷೇಧಿಸಲಾಗಿದೆ.

ಟುನಿಷ್ಯದಲ್ಲಿ 24 ವರ್ಷಗಳ ಕಾಲ ಝೈನುಲ್‍ಅಬದೀನ್ ಬಿನ್ ಅಲಿಯವರ ಸರ್ವಾಧಿಕಾರವಿತ್ತು. ನಂತರ ನಡೆದ ಅರಬ್ ಕ್ರಾಂತಿಯಲ್ಲಿ ಅವರು ಪದಚ್ಯುತರಾಗಿ ಸೌದಿ ಅರೇಬಿಯದಲ್ಲಿ ಆಶ್ರಯ ಪಡೆದುಕೊಂಡಿದ್ದ ಅವರು ಕಳೆದ ತಿಂಗಳು ಸೌದಿ ಅರೇಬಿಯದಲ್ಲಿ ನಿಧನರಾದರು.

ಬಿನ್ ಅಲಿ ಪದಚ್ಯುತರಾದ ಬಳಿಕ ಮೂರು ಸಾರ್ವತ್ರಿಕ ಚುನಾವಣೆಗಳು ಟುನಿಷ್ಯದಲ್ಲಿ ನಡೆದಿದ್ದರೂ ನಿರುದ್ಯೋಗ, ಹಣದುಬ್ಬರ ಕಡಿಮೆಯಾಗಿಲ್ಲ. ಆಹಾರ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದನ್ನು ಪ್ರತಿಭಟಿಸಿ ಜನರು ಇತ್ತೀಚೆಗೆ ಬೀದಿಗಿಳಿದಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಅನ್ನಹದ್ ಪಾರ್ಟಿ ಈ ಸಲ ಅಧಿಕಾರಕ್ಕೇರಬಹುದು ಎಂದು ನಿರೀಕ್ಷಿಸಲಾಗುತ್ತಿದೆ.