ಶ್ರೀನಗರ,ಅ.7: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ತೆರವು ಗೊಳಿಸಿದ ಬೆನ್ನಿಗೆ ಗೃಹ ಬಂಧನದಲ್ಲಿರಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ಪೀಪಲ್ಸ್ ಡೆಮಕ್ರಾಟಿಕ್ ಪಾರ್ಟಿ ಅಧ್ಯಕ್ಷೆ ಮೆಹಬೂಬ ಮುಫ್ತಿಯವರನ್ನು ಸಂದರ್ಶಿಸಲು ಪಾರ್ಟಿ ನಾಯಕರಿಗೆ ಅನುಮತಿ ನೀಡಲಾಗಿದೆ.
ಜಮ್ಮುವಿನಿಂದ ಹತ್ತು ಮಂದಿ ಪ್ರತಿನಿಧಿಗಳು ಸೋಮವಾರ ಮೆಹಬೂಬರನ್ನು ಸಂದರ್ಶಿಸಲಿರುವರು. ಮೆಹಬೂಬ ಮುಫ್ತಿ ಶ್ರೀನಗರದ ಹರಿ ನಿವಾಸ್ನಲ್ಲಿ ಗೃಹ ಬಂಧನದಲ್ಲಿದ್ದು ಪುತ್ರಿ ಇಲ್ತಿಜಾರಿಗೆ ಅವರನ್ನು ಭೇಟಿಯಾಗಲು ಸುಪ್ರೀಂ ಕೋರ್ಟು ಅನುಮತಿ ನೀಡಿತ್ತು.
ನ್ಯಾಶನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲ ಮತ್ತು ಪುತ್ರ ಉಮರ್ ಅಬ್ದುಲ್ಲರನ್ನು ಪ್ರತನಿಧಿ ತಂಡ ಭೇಟಿ ಮಾಡಿದ ಬೆನ್ನಿಗೆ ಮೆಹಬೂಬರನ್ನು ಭೇಟಿಯಾಗಲು ಅನುಮತಿ ನೀಡಲಾಗಿದೆ. ಜಮ್ಮು ಪ್ರೊವಿನ್ಶಲ್ ಪ್ರೆಸಿಡೆಂಟ್ ದೇವೆಂದರ್ ಸಿಂಗ್ರಾಣ, ಪಾರ್ಟಿ ಮಾಜಿ ಶಾಸಕರ 15 ಮಂದಿಯ ತಂಡ ಶ್ರೀನಗರದ ವಸತಿಯಲ್ಲಿ ಫಾರೂಕ್ ಅಬ್ದುಲ್ಲರನ್ನು ಸಂದರ್ಶಿಸಿತ್ತು. 81 ವರ್ಷದ ಫಾರೂಕ್ ಅಬ್ದುಲ್ಲರನ್ನು ಶ್ರೀನಗರದ ಅವರ ಮನೆಯಲ್ಲಿ ಮತ್ತು ಉಮರ್ ಅಬ್ದುಲ್ಲರನ್ನು ಗೆಸ್ಟ್ ಹೌಸ್ನಲ್ಲಿ ಗೃಹ ಬಂಧನದಲ್ಲಿರಿಸಲಾಗಿದೆ.












