ಸನ್ಮಾರ್ಗ ವಾರ್ತೆ
ಕೇರಳ,ಅ.10: ಕಾಕನಾಡಿನಲ್ಲಿ ಹದಿನೇಳು ವರ್ಷದ ಹುಡುಗಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಯುವಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಾಕನಾಡಿನ ಪದ್ಮಾಲಯದಲ್ಲಿ ಶಾಲ ಎಂಬವರ ಪುತ್ರಿ ದೇವಿಕ ಮೃತಪಟ್ಟ ಬಾಲಕಿಯಾಗಿದ್ದು ಬುಧವಾರ ರಾತ್ರೆ 11:30ಕ್ಕೆ ಘಟನೆ ನಡೆದಿತ್ತು. ಬೈಕಿನಲ್ಲಿ ಹುಡುಗಿಯ ಮನೆಗೆ ಬಂದ ಮಿಥುನ್ ಎಂಬಾತ ಬಾಲಕಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇದರೊಂದಿಗೆ ಬೆಂಕಿ ಹರಡಿ ಬಾಲಕಿಯೊಂದಿಗೆ ಯುವಕನೂ ಸತ್ತನು.
ಊರವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು ಇಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿಯಲ್ಲಿ ಮೃತಪಟ್ಟಿದ್ದಾರೆ. ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ್ದು ಕೊಲೆಗೆ ಕಾರಣವಾಗಿತ್ತು ಎಂದು ವರದಿಗಳಿವೆ. ಬಾಲಕಿಯನ್ನು ರಕ್ಷಿಸಲು ಹೆತ್ತವರು ಪ್ರಯತ್ನಿಸುವ ವೇಳೆ ತಂದೆ ತಾಯಿಗೆ ಸುಟ್ಟ ಗಾಯಗಳಾಗಿವೆ. ಇವರಲ್ಲಿ ಒಬ್ಬರು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಮತ್ತೊಬ್ಬರನ್ನು ತೃಕ್ಕರಿಕ್ಕರ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.












