ಸೌದಿ ಅರೇಬಿಯದಲ್ಲಿ ಕಾನೂನು ಸಡಿಲೀಕರಣ: ವಿದೇಶಿ ದಂಪತಿಗಳಿಗೆ ಹೊಟೇಲು ಕೋಣೆ ಪಡೆಯಲು ಅನುಮತಿ

0
579

ಸನ್ಮಾರ್ಗ ವಾರ್ತೆ

ರಿಯಾದ್: ದೇಶದಲ್ಲಿ ಮಹಿಳೆಯರ ಮೇಲಿನ ನಿಯಂತ್ರಣ ತೆರವುಗೊಳಿಸಿದ ಬೆನ್ನಿಗೆ ಪುರುಷ ರಕ್ಷಕನಿಲ್ಲದೆ ಮಹಿಳೆ ಸ್ವತಂತ್ರವಾಗಿ ಸಂಚರಿಸಬಹುದು. ಮದುವೆಯ ದಾಖಲೆ ಇಲ್ಲದೆ ವಿದೇಶಿ ಪುರುಷ ಮತ್ತು ಮಹಿಳೆ ಹೊಟೇಲ್ ಕೋಣೆ ಬಾಡಿಗೆ ಪಡೆಯಬಹುದು ಎಂದು ಆದೇಶ ಹೊರಡಿಸಿದ್ದು, ಈ ಹಿಂದೆ ಇದ್ದ ನಿಷೇಧವನ್ನು ಸೌದಿ ಸರಕಾರ ತೆರವು ಗೊಳಿಸಿದೆ.

ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಕಾನೂನಿನಲ್ಲಿ ಸುಧಾರಣೆ ತರಲಾಗುತ್ತಿದೆ. ಕಳೆದ ವಾರ ಸೌದಿ ಅರೇಬಿಯ ಹೊಸ ವೀಸಾ ಯೋಜನೆ ರೂಪಿಸಿದೆ. ಒಟ್ಟಿನಲ್ಲಿ ಒಟ್ಟು ಆಂತರಿಕ ಉತ್ಪಾದನೆಯಲ್ಲಿ ಶೇ.10ಕ್ಕೆ ತಲುಪಿಸಲು ಟೂರಿಸಂ ಅನ್ನು ಗುರಿಯಾಗಿರಿಸಲಾಗಿದೆ. ಈ ಹೊಸ ವೀಸಾ ಯೋಜನೆಯಲ್ಲಿ ದೇಶದಲ್ಲಿ ಯುನೆಸ್ಕೊದ ಐದು ಲೋಕ ಪಾರಂಪರಿಕ ಸ್ಥಳಕ್ಕೆ ಸ್ಥಾನಮಾನ ಕಲ್ಪಿಸಲಾಗಿದೆ.