ಸನ್ಮಾರ್ಗ ವಾರ್ತೆ
ಜೆರುಸಲೇಮ್: ಶತ್ರುವಾಗಿರುವ ಇರಾನ್ ವಿರುದ್ಧ ಚಟುವಟಿಕೆಗಳ ಭಾಗವಾಗಿ ಗಲ್ಫ್ ದೇಶಗಳ ನಡುವೆ ಶಾಂತಿ ಒಪ್ಪಂದ ಸ್ಥಾಪಿಸಲು ಇಸ್ರೇಲ್ ರಂಗ ಪ್ರವೇಶಿಸಿದೆ.
ಇಸ್ರೇಲ್ ವಿದೇಶ ಸಚಿವ ಇಸ್ರಾಯೇಲ್ ಕಾಟ್ಸ್ ಈ ವಿಷಯವನ್ನು ತಿಳಿಸಿದ್ದು, ಬಹ್ರೈನ್ ವಿದೇಶ ಸಚಿವ ಶೇಖ್ ಖಾಲಿದ್ ಬಿನ್ ಅಹ್ಮದ್ ಖಲೀಫರೊಂದಿಗೆ ಕಳೆದ ಜುಲೈ ತಿಂಗಳಿನಲ್ಲಿ ಸಮಾಲೋಚನೆ ನಡೆಸಿದ್ದರು. ಈ ರೀತಿ ಅರಬ್ ರಾಷ್ಟ್ರಗಳಲ್ಲಿ ಶಾಂತಿ ಒಪ್ಪಂದ ರೂಪಿಸುವುದಾಗಿ ಕಾಟ್ಸ್ ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ನಾವು ಅಮೆರಿಕದ ಸಹಕಾರದಲ್ಲಿ ಗಲ್ಫ್ ದೇಶಗಳ ನಡುವೆ ಶಾಂತಿ ಒಪ್ಪಂದ ಜಾರಿಗೆ ಬರುವಂತೆ ಮಾಡಲು ಯತ್ನಿಸುತ್ತಿದ್ದೇವೆ. 22 ಅರಬ್ ದೇಶಗಳಲ್ಲಿ ಈಜಿಪ್ಟ್ ಮತ್ತು ಜೋರ್ಡಾನ್, ಫೆಲಸ್ತೀನಿನಲ್ಲಿ ಇಸ್ರೇಲ್ ಅತಿಕ್ರಮಣ ನಡೆಸುವುದನ್ನು ಅನಧೀಕೃತವಾಗಿ ಅಂಗೀಕರಿಸಿರುವ ದೇಶಗಳಾಗಿವೆ.












