ಸನ್ಮಾರ್ಗ ವಾರ್ತೆ
ಸುಳ್ಯ,ಅ,11: ಸುಳ್ಯ ಜಾಲ್ಸೂರು ಸಮೀಪದ ಅಡ್ಕಾರ್ ನಲ್ಲಿ ಕಳೆದ ವಾರ ಅಪಘಾತ ಆದ ಸ್ಥಳಕ್ಕೆ ಸಮೀಪದಲ್ಲಿಯೇ ಇನ್ನೊಂದು ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ದಾರುಣ ಸಾವನ್ನಪ್ಪಿದ ಘಟನೆ ಇಂದು ಸಂಜೆ 6 ಗಂಟೆಗೆ ನಡೆದಿದೆ.
ಕಳೆದ ವಾರ ಅಪಘಾತ ಸಂಭವಿಸಿ ನಾಲ್ವರು ಮೃತಪಟ್ಟ ಸ್ಥಳದ ಸಮೀಪದಲ್ಲಿಯೇ ಬಸ್ ಮತ್ತು ಇನೋವಾ ಕಾರು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮವಾಗಿ ಇನೋವಾದಲ್ಲಿದ್ದ ಇಬ್ಬರು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಸುಳ್ಯ ಕಡೆಯಿಂದ ಮಂಗಳೂರು ಕಡೆಗೆ ಹೊರಟಿದ್ದ ಇನೋವಾ(ಕೆಎ 22-ಎನ್7974) ಹಾಗೂ ಕೇರಳದಿಂದ ಸುಳ್ಯದ ಕಡೆಗೆ ಹೊರಟಿದ್ದ ಬಸ್(ಕೆಎಲ್15 ಏ-1747) ಪರಸ್ಪರ ಡಿಕ್ಕಿ ಹೊಡೆದಿವೆ. ಮೃತ ದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಯ ಅಂಬ್ಯುಲೆನ್ಸ್ ಮೂಲಕ ಸಾಗಿಸಲಾಗಿದೆ.












