ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.12: ಪ್ರಧಾನಿ ನರೇಂದ್ರ ಮೋದಿ ಶನಿವಾರ ತಮಿಳ್ನಾಡಿನ ಮಹಾಬಲಿಪುರಂ ಬೀಚ್‍ನಲ್ಲಿ ಬೆಳಗ್ಗೆ ಸ್ವಚ್ಛತಾ ಅಭಿಯಾನ ನಡೆಸಿದರು. ಅಲ್ಲಿ ಅವರು ಕ್ಲೀನಿಂಗ್ ಮಾಡಿ, ಕಸವನ್ನು ಒಟ್ಟುಗೂಡಿಸಿದರು. ಪ್ರಧಾನಿ ಮೋದಿ ಬರಿಗಾಲೊನಲ್ಲಿ ಬೀಚ್‍ನಲ್ಲಿ ನಡೆದಾಡಿದ ಅವರು ಮೂವತ್ತು ನಿಮಿಷಗಳ ಕಾಲ ಅಲ್ಲಿದ್ದರು. ಸಮುದ್ರ ಬದಿ ತೇಲಿ ಬಂದ ಕಸಗಳಾದ ಬಾಟ್ಲಿ ಇತ್ಯಾದಿಗಳನ್ನು ಒಂದು ಚೀಲದಲ್ಲಿ ಹಾಕಿ, ತನ್ನ ಹೊಟೇಲು ಸಹಾಯಕ ಜಯರಾಜ್‍ರಿಗೆ ಕೊಟ್ಟರು.
ತಾನು ಸ್ವಚ್ಛತಾ ಕಾರ್ಯ ನಡೆಸಿರುವುದನ್ನು ಮೋದಿಯವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇಂದು ಬೆಳಗ್ಗೆ ಮೂವತ್ತು ನಿಮಿಷಕ್ಕೂ ಹೆಚ್ಚು ಸಮಯ ಕಸಗಳನ್ನು ಒಟ್ಟುಗೂಡಿಸಿ ಜಯರಾಜ್‍ರಿಗೆ ನೀಡಿದೆ ಎಂದು ಹೇಳಿದ್ದಾರೆ. ಸಾರ್ವಜನಿಕ ಸ್ಥಳವನ್ನು ಶುಚಿಗೊಳಿಸುವುದು ಎಲ್ಲರ ಹೊಣೆಯಾಗಿದೆ ಎಂದು ಅವರು ಹೇಳಿದ್ದಾರೆ.
ಇಂದು ಬೆಳಗ್ಗೆ ಮಹಾಬಲಿಪುರಂ ಸಮುದ್ರ ತಟದಲ್ಲಿ ಮೂವತ್ತು ನಿಮಿಷ ಜಾಗಿಂಗ್ ಮತ್ತು ಸಾಫ್ ಸಫಾಯಿ ನಡೆಸಿದೆ ಎಂದು ಅವರು ತಿಳಿಸಿದ್ದಾರೆ. ನಾವು ನಮ್ಮ ಸಾರ್ವಜನಿಕ ಸ್ಥಳವನ್ನು ಶುಚಿಯಾಗಿಟ್ಟುಕೊಳ್ಳುತ್ತೇವೆ ಎಂದು ದೃಢ ನಿಶ್ಚಯ ಮಾಡಿಕೊಳ್ಳಿರಿ ಎಂದು ಅವರು ದೇಶಕ್ಕೆ ಕರೆ ನೀಡಿದ್ದಾರೆ.
Plogging at a beach in Mamallapuram this morning. It lasted for over 30 minutes.
Also handed over my ‘collection’ to Jeyaraj, who is a part of the hotel staff.
Let us ensure our public places are clean and tidy!
Let us also ensure we remain fit and healthy. pic.twitter.com/qBHLTxtM9y
— Narendra Modi (@narendramodi) October 12, 2019












