ಸನ್ಮಾರ್ಗ ವಾರ್ತೆ
ವಿಶಾಖಪಟ್ಟಣಂ,ಅ.12: ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ರೆಡ್ಡಿ ಮನೋರೋಗಿಯಂತೆ ವರ್ತಿಸುತ್ತಿದ್ದಾರೆ ಎಂದು ತೆಲುಗು ದೇಶಂ ಪಾರ್ಟಿ ಅಧ್ಯಕ್ಷ ಚಂದ್ರಬಾಬು ನಾಯಿಡು ಹೇಳಿದ್ದಾರೆ.
ಜನವಿರೋಧಿ ನೀತಿಗಳನ್ನು ಅವರು ಜಾರಿಗೆ ತರುತ್ತಿದ್ದಾರೆ. ಅನವಶ್ಯಕವೂ ಕಾನೂನಿಗೆ ವಿರುದ್ಧವೂ ಆಗಿ ರಾಜಕೀಯ ನಾಯಕರ ಮೇಲೆ ಕೇಸು ಹಾಕಿಸುತ್ತಿದ್ದಾರೆ. ಅವರು ಓರ್ವ ಮಾನಸಿಕ ಅಸ್ವಸ್ಥನಂತೆ ಕಂಡು ಬರುತ್ತಿದ್ದಾರೆ ಎಂದು ನಾಯ್ಡು ಟೀಕಿಸಿದರು.
ಜಗನ್ರ ಸರಕಾರ ತುಂಬ ಕೆಟ್ಟ ಸರಕಾರವಾಗಿದೆ. ಪಕ್ಷದ ನಾಯಕರಿಂದ ಜಗನ್ ತೆರಿಗೆ ಸಂಗ್ರಹಿಸುತ್ತಿದ್ದಾರೆ. ಹಲವು ಮುಖ್ಯಮಂತ್ರಿಗಳನ್ನು ಕಂಡಿದ್ದೇನೆ. ಆದರೆ ಇಂತಹ ಒಬ್ಬ ಮುಖ್ಯಮಂತ್ರಿಯನ್ನು ನಾನು ನೋಡೇ ಇಲ್ಲ. ಜಗನ್ ಅಹಂಕಾರವನ್ನು ಬಿಟ್ಟು ಬಿಡಬೇಕು ಎಂದು ನಾಯಿಡು ಹೇಳಿದರು. ಜಗನ್ ಅಧಿಕಾರಕ್ಕೇರಿದ ನಂತರ ಹಲವಾರು ಪಿಡಿಪಿ ನಾಯಕರಿಗೆ ಕಿರುಕುಳ ಕೊಡಲಾಗುತ್ತಿದೆ ಎಂದು ವರದಿಯಾಗಿತ್ತು.












