ಭಯೋತ್ಪಾದಕರನ್ನು ಬೆಂಬಲಿಸುವುದನ್ನು ಪಾಕಿಸ್ತಾನ ನಿಲ್ಲಿಸಬೇಕು- ಅಮೆರಿಕ

0
462

ಸನ್ಮಾರ್ಗ ವಾರ್ತೆ

ಇಸ್ಲಾಮಾಬಾದ್,ಅ.12: ಕಾಶ್ಮೀರ ವಿಷಯದಲ್ಲಿ ಭಾರತ-ಪಾಕಿಸ್ತಾನ ನಡುವೆ ಉದ್ಭವಿಸಿದ ಘರ್ಷಣಾ ಸ್ಥಿತಿಯನ್ನು ಸರಳೀಕರಿಸಲು ದಾರಿಗಳನ್ನು ಹುಡುಕಬೇಕಾಗಿದೆ ಎಂದು ಅಮೆರಿಕದ ಸೆನೆಟರ್‌ಗಳು ಹೇಳಿದ್ದಾರೆ.

ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವುದನ್ನು ಪಾಕಿಸ್ತಾನ ಕೊನೆಗೊಳಿಸಬೇಕೆಂದು ಸೆನೆಟರ್‌ಗಳು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ, ಪಾಕಿ ಆಕ್ರಮಿತ ಕಾಶ್ಮೀರದ ಅಧಿಕಾರಿಗಳೊಂದಿಗೆ ಹಿರಿಯ ಸೆನೆಟರ್‍‌ಗಳಾದ ಮ್ಯಾಗಿ ಹಸನ್, ಕ್ರಿಸ್‍ವಾನ್ ಹೊಲನ್ ನಡೆಸಿದ ಚರ್ಚೆಯಲ್ಲಿ ಈ ವಿಷಯವನ್ನು ಆಗ್ರಹಿಸಿದರು.

ಭಯೋತ್ಪಾದನಾ ದಾಳಿಗಳನ್ನು ನಿರ್ಮೂಲಿಸುವುದು, ಭಯೋತ್ಪಾದನಾ ಆಶಯಗಳನ್ನು ಪ್ರಸಾರ ಮಾಡುವುದನ್ನು ತಡೆಯಲು ಇತ್ಯಾದಿ ಸಹಿತ ವಿಷಯಗಳಲ್ಲಿ ಪಾಕಿಸ್ತಾನ ನಾಯಕರೊಂದಿಗೆ ನಡೆಸಿದ ಚರ್ಚೆ ಸಹಾಯಕವಾಗಿದೆ ಎಂದು ಹಸನ್ ಹೇಳಿದರು.

ಜಾಗತಿಕ ಅರ್ಥವ್ಯವಸ್ಥೆ ಬಲಿಷ್ಠಗೊಳಿಸಲು ಮತ್ತು ಭಯೋತ್ಪಾದನೆಯ ವಿರುದ್ಧ ಹೋರಾಟ, ಅಫ್ಘಾನಿಸ್ತಾನವನ್ನು ಬಲಪಡಿಸುವುದು ಇತ್ಯಾದಿ ಕಾರ್ಯಗಳಲ್ಲಿ ಪಾಕಿಸ್ತಾನಕ್ಕೆ ಮುಖ್ಯ ಭಾಗಿದಾರನಾಗಲು ಸಾಧ್ಯವಿದೆ ಎಂದು ಮ್ಯಾಗಿ ಹಸನ್ ಹೇಳಿದರು.